ಪೋಲೀಸರ ಮೇಲೆ ಹಲ್ಲೆ ಆರೋಪ : ಆರೋಪಿ ನಿರ್ದೋಷಿಯೆಂದು ತೀರ್ಪು

0

ಪೋಲೀಸರಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದಾರೆಂಬ ಆರೋಪದ ಕೇಸು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪೊಲೀಸರ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ಬೈದು, ಕರ್ತವ್ಯಕ್ಕೆ ಅಡ್ಡಿಪಡಿಸಿ, ಹೈವೇ ಪಟ್ರೋಲ್ ಗೆ ಹಾನಿ ನಡೆಸಿದ ಆರೋಪದ ಕೇಸು ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಸರಕಾರಿ ಅಭಿಯೋಜಕರು ಕೇಸನ್ನು ಸಾಬೀತು ಮಾಡಲು ವಿಫಲವಾಗಿದ್ದು, ಆರೋಪಿಯನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿರುವ ಘಟನೆ ವರದಿಯಾಗಿದೆ.


2020 ಎಪ್ರಿಲ್ 1 ರಂದು ಕೊರೋನಾ ಸಂದರ್ಭ ಮಂಡೆಕೋಲು ಗ್ರಾಮದ ಮುರೂರು ಚೆಕ್ ಪೋಸ್ಟ್ ಮೂಲಕ ವಾಹನಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವೇಳೆ ಆ ರಸ್ತೆಯಾಗಿ ಕಾಸರಗೋಡಿನಿಂದ ವಾಹನದಲ್ಲಿ ಸಿನಾನ್ ಎಂಬವರು ಬಂದಿದ್ದರು. ಮುರೂರು ಚೆಕ್ ಪೋಸ್ಟ್‌ನಲ್ಲಿ ಪೋಲೀಸರು ತಡೆದಿದ್ದರು. ಈ ವೇಳೆ ಆರೋಪಿಯು ಕರ್ತವ್ಯದಲ್ಲಿದ್ದ ಪೋಲೀಸರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು. ಸಿನಾನ್ ರನ್ನು ಪೋಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದು ಆರೋಪಿಯ ಆರೋಪವನ್ನು ರುಜುವಾತು ಪಡಿಸಲು ಸಾಧ್ಯವಾಗಿಲ್ಲ. ಮತ್ತು ಸಾಕ್ಷಿಗಳ ಹೇಳಿಕೆಗಳು ಒಂದಕ್ಕೊಂದು ಪೂರಕವಾಗಿರದೇ ಇರುವುದರಿಂದ ಇದು ನೈಜತೆಯಿಂದ ಕೂಡಿಲ್ಲ ಎಂದು ವಿವರವನ್ನು ನೀಡಿ ಆರೋಪಿಯನ್ನು ದೋಷಮುಕ್ತಗೊಳಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.


ಸಿನಾನ್‌ರ ಪರವಾಗಿ ನ್ಯಾಯವಾದಿಗಳಾದ ಶ್ಯಾಂ ಪಾನತ್ತಿಲ, ಪ್ರತಿಭಾ ಶ್ಯಾಂ ಪಾನತ್ತಿಲ ಹಾಗೂ ರಕ್ಷಿತಾ ಹರಿ ಉಳುವಾರು ವಾದಿಸಿದ್ದಾರೆ.