ಸ್ವಾತಂತ್ರ್ಯೋತ್ಸವ ಭಾಷಣ ಸ್ಪರ್ಧೆಯಲ್ಲಿ ಕೌಶಲ್ಯ ಅಂಬೆಕಲ್ಲು ಅವರಿಗೆ ಬಹುಮಾನ

0

ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮತ್ತು ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಸುಳ್ಯದ ಜೂನಿಯರ್ ಕಾಲೇಜು ವಿದ್ಯಾರ್ಥಿನಿ ಚೆಂಬು ಗ್ರಾಮದ ಕೌಶಲ್ಯ ಅಂಬೆಕಲ್ಲು ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.

ಈಕೆ ಚೆಂಬು ಗ್ರಾಮದ ಅಂಬೆಕಲ್ಲಾ ಚಿದಾನಂದ ಮತ್ತು ಶ್ರೀಮತಿ ಪುಷ್ಪಾವತಿ ದಂಪತಿಗಳ ಪುತ್ರಿ.