ಸುಳ್ಯ ಹಾಗೂ ಜಾಲ್ಸೂರಿನಲ್ಲಿ ಪೊಲೀಸರಿಂದ ನಾಕಾಬಂದಿ
ತಡರಾತ್ರಿವರೆಗೆ ಕಾದು ಕಾದು ಮರಳಿದ ಪೊಲೀಸರು
ಪುತ್ತೂರು ಸಮೀಪದ ಕಬಕದಿಂದ ಕಾರಿನಲ್ಲಿ ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಆದ್ದರಿಂದ ನನ್ನನ್ನು ರಕ್ಷಣೆ ಮಾಡಿ ಅನ್ನುವ ಕರೆ ಆ 17 ತಡ ರಾತ್ರಿ 112 ಗೆ ಬಂದ ಹಿನ್ನೆಲೆಯಲ್ಲಿ ಜಾಲ್ಸೂರು ಹಾಗೂ ಸುಳ್ಯದಲ್ಲಿ ಪೊಲೀಸರು ನಾಕಾ ಬಂದಿ ಹಾಕಿ ಕಾದಿರುವ ಘಟನೆ ನಡೆದಿದೆ.
ಅನಾಮಿಕ ವ್ಯಕ್ತಿಯೊಬ್ಬ ಈ ಕರೆ ಮಾಡಿದ್ದು ‘ನನ್ನನ್ನು ಆಲ್ಟೋ ಕಾರಿನಲ್ಲಿ ಕಿಡ್ಯ್ನಾಪ್ ಮಾಡಲಾಗಿದೆ. ತಕ್ಷಣ ಬಚಾವ್ ಮಾಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಕರೆ ಬಂದ ತಕ್ಷಣ 112 ರವರು ಪುತ್ತೂರು ಟೌನ್ ಪೊಲೀಸ್ ಠಾಣೆಗೆ ತಿಳಿಸಿದ್ದು, ಅವರು ಕೂಡಲೇ ವಯರ್ಲೆಸ್ಸ್ ಮೂಲಕ ಸುಳ್ಯ ಹಾಗೂ ಇನ್ನಿತರ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಸುಳ್ಯ ಪೊಲೀಸರು ಸುಳ್ಯ ಹಾಗೂ ಜಾಲ್ಸೂರು ಬಳಿ ನಾಕಾ ಬಂದಿ ಏರ್ಪಡಿಸಿ ಬಹಳ ಸಮಯ ಕಾದು ಕುಳಿತಿದ್ದು, ಬಳಿಕ ಯಾವುದೇ ವಾಹನ ಆ ರೀತಿಯಲ್ಲಿ ಬರದೇ ಇದ್ದಾಗ ಅಲ್ಲಿಂದ ಪೊಲೀಸರು ಮರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕರೆ ಮಾಡಿದವರು ಯಾರು ಅನ್ನುವುದರ ಬಗ್ಗೆ ಮಾಹಿತಿ ಇನ್ನೂ ಸಿಕ್ಕದ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.