ಮೊಬೈಲ್ ಗ್ಯಾರೇಜ್’ನಲ್ಲಿ ಬಿಗ್ ವಿನ್ ಬಂಪರ್ ಬಹುಮಾನ ಕೂಪನ್ ಡ್ರಾ

0

ಯಾರ ಪಾಲಾಯಿತು 55 ಸಾವಿರ ಮೌಲ್ಯದ ಐಫೋನ್ 13 & ಚಿನ್ನದ ನಾಣ್ಯ..!

ಸುಳ್ಯದ ಮುಖ್ಯ ರಸ್ತೆಯ  ಬಾಳೆಮಕ್ಕಿಯಲ್ಲಿರುವ  ಪ್ರತಿಷ್ಠಿತ ಮೊಬೈಲ್ ಶೋರೂಮ್ ‘ಮೊಬೈಲ್ ಗ್ಯಾರೇಜ್’ನ  ನವೀಕೃತ ಸಂಸ್ಥೆಯ ಉದ್ಘಾಟನೆ ಯ ಪ್ರಯುಕ್ತ ಹಮ್ಮಿಕೊಂಡ ಬಂಪರ್ ಕೂಪನ್ ಗಳ ಡ್ರಾ ಆ. 20ರಂದು ನಡೆಯಿತು.

ಪ್ರಥಮ ಬಹುಮಾನ 55 ಮೌಲ್ಯದ ಐಫೋನ್ 13 ದೇವಪ್ಪ ಅರಂಬೂರು (ಕೂಪನ್ ಸಂಖ್ಯೆ 482), ರವರಿಗೆ ಲಭಿಸಿದೆ.ದ್ವಿತೀಯ ಬಹುಮಾನ ಚಿನ್ನದ ನಾಣ್ಯ ಅಬ್ದುಲ್ ಹಮೀದ್ ಪೆರಾಜೆ (ಕೂಪನ್ ಸಂಖ್ಯೆ 10190) ಇವರಿಗೆ ಲಭಿಸಿದೆ.

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಘದ ಅಧ್ಯಕ್ಷ ಪಿ. ಬಿ . ಸುಧಾಕರ್ ರೈ ಪ್ರಥಮ ಬಹುಮಾನದ ಡ್ರಾ ನಡೆಸಿ ಕೊಟ್ಟರು. ಉದ್ಯಮಿ ಅಶೋಕ್ ಪ್ರಭು ರವರು ದ್ವಿತೀಯ ಬಹುಮಾನದ ಅದೃಷ್ಟ ಚೀಟಿ ಎತ್ತಿ ವಿಜೇತರನ್ನು ಘೋಷಣೆ ಮಾಡಿದರು.

ನೋಟರಿ ವಕೀಲರಾದ ಅಬೂಬಕ್ಕರ್ ಅಡ್ಕರ್, ಸುಳ್ಯ ಮೊಬೈಲ್ ರೀಟೇಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಅತಿಥಿಗಳಾಗಿ ಭಾಗವಹಿಸಿದ್ದರು.

ಸುದ್ದಿ ಬಿಡುಗಡೆ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನವೀಕೃತಗೊಂಡಿರುವ ಈ ಮೊಬೈಲ್ ಶೋರೂಮ್ ನಲ್ಲಿ ಎಲ್ಲಾ ಕಂಪನಿಯ ಮೊಬೈಲ್ ಗಳು, ಎಸಿ,  ಲ್ಯಾಪ್ ಟಾಪ್, ಸ್ಮಾರ್ಟ್ ಟಿವಿಗಳು, ಮೊಬೈಲ್ ಬಿಡಿ ಭಾಗಗಳು ಅತ್ಯಾಕರ್ಷಕ ಬೆಲೆಯಲ್ಲಿ ದೊರೆಯುತ್ತದೆ.