ವಿಟ್ಲ ಪಡಿಬಾಗಿಲು ಮುವಾಜೆ ಸಭಾಂಗಣದಲ್ಲಿ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮದಲ್ಲಿ ಸ್ವರ ಮಾಧುರ್ಯ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀ ಗಣನಾಥ ಸಿಂಧೂರ ವರ್ಣ ಹಾಡಿನೊಂದಿಗೆ ಶ್ರೀ ವರಲಕ್ಷ್ಮಿ ಶ್ರೀ ರಾಗ ಹಾಡಿನೊಂದಿಗೆ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಕಾಮಾಕ್ಷಿ ವರಲಕ್ಷ್ಮಿರಾಗ ವಸಂತ ,ಪಾಹಿಸುವೆ ಶಿವರಂಜಿನಿ ರಾಗ ,ಎಂದರೋ ಮಹಾನುಭಾವುಲು ಶ್ರೀರಾಗ ,ಪಂಚರತ್ನ ತ್ಯಾಗರಾಜರ ಕೃತಿ, ಸಾದರ ಮವ ನಿರುಪಮ ಸರಸ್ವತಿ ರಾಗ, ತಿಲ್ಲಾನ ಬೃಂದಾವನಿ ಸಾರಂಗ ಹಾಡಿನೊಂದಿಗೆ ಸಮಾಪ್ತಿಯಾಯಿತು.
ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ನಿರ್ದೇಶನದಲ್ಲಿ ಸಿಂಚನಲಕ್ಷ್ಮಿ ಕೋಡಂದೂರ್ ಭಾಗ್ಯಶ್ರೀ ಪಡಿಬಾಗಿಲು, ವಾಣಿ, ಪ್ರತಿಭಾ, ಆದರ್ಶಿನಿ, ಸಾತ್ವಿಕ ಮುಂತಾದವರು ಭಕ್ತಿಗೀತೆ, ಭಾವಗೀತೆ ಜಾನಪದಗೀತೆ, ದಾಸರ ಗೀತೆಗಳನ್ನು ಸ್ವರ ಸಿಂಚನ ಸಂಗೀತ ಶಾಲಾ ವಿದ್ಯಾರ್ಥಿಗಳು ಜೊತೆಯಲ್ಲಿ ಹಾಡಿ ಎಲ್ಲರ ಮನ ಸೆಳೆದು ರಂಜಿಸಿದರು.ಗೋಪಾಲಕೃಷ್ಣ ನಾಯಕ್, ಎಂಆರ್ ಪಿಚ್ಚರ್ಸ್ ಬಾಯರು ಸಹಕರಿಸಿದರು.
ಬರಹ: ಕುಮಾರ್ ಪೆರ್ನಾಜೆ ಪುತ್ತೂರು