ಸುಳ್ಯದ ಅಂಬೆಟಡ್ಕ ದ ಅಪ್ಪು ಶೇಟ್ ಕಾಂಪೌಂಡ್ ನಲ್ಲಿ ಕಳೆದ 6 ವರ್ಷದಿಂದ ಕಾರ್ಯಚರಿಸುತ್ತಿದ್ದ ಅಕ್ಷತ ಬೆಳ್ಳಿಪ್ಪಾಡಿ ಮಾಲಕತ್ವದ
ರೇಡಿಯನ್ಸ್ ಬ್ಯೂಟಿ ಪಾರ್ಲರ್ ಆ.22 ರಂದು ಹತ್ತಿರದ ಕೆವಿಜಿ ಆಯುರ್ವೇದ ಕಾಲೇಜಿನ ಮುಂಭಾಗವಿರುವ
ಅಡ್ಕಾರ್ ಆರ್ಕೆಡ್‌ಗೆ ಸ್ಥಳಾಂತರಗೊಂಡು ಇಂದು ಶುಭಾರಂಭಗೊಂಡಿತು.
ಅರ್ಚಕ ನಾಗರಾಜ ಭಟ್ಟರ ಪೌರೋಹಿತ್ಯದಲ್ಲಿ ಮುಂಜಾನೆ ಗಣಪತಿ ಪೂಜೆ ಮತ್ತು ಲಕ್ಷ್ಮಿ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕಿ ಅಕ್ಷತಾ ಬೆಳ್ಳಿಪ್ಪಾಡಿ, ಪೋಷಕರಾದ ಕುಶಾಲಪ್ಪ ಗೌಡ, ರತ್ನಾವತಿ
ಸಹೋದರಿ ಧನ್ಯ, ಸಹೋದರ ಗಗನ್ , ಪುತ್ರ ವಿದ್ವತ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಇಲ್ಲಿ ಬ್ರೈಡಲ್ ಮೇಕಪ್, ಪೇಶಿಯಲ್, ಹೇರ್ ಕಟ್ ಸೇರಿದಂತೆ ಎಲ್ಲಾ ಬ್ಯೂಟಿ ಸರ್ವಿಸ್ ನಿಖರ ಬೆಲೆಯಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.