ಕರ್ನಾಟಕ ಸರಕಾರದ ಆದೇಶದಂತೆ ಕೃಷಿ ಪಂಪ್ ಸೆಟ್ಟುಗಳ ಆರ್ ಆರ್ ನಂಬರಿಗೆ ಆಧಾರ್ ಜೋಡಣೆ ಮಾಡಬೇಕಾಗಿದ್ದು, ನಾಳೆ ಶುಕ್ರವಾರ ಅಂದರೆ ಆಗಸ್ಟ್ 23 ರಂದು ಬೆಳಿಗ್ಗೆ 10 ಗಂಟೆಗೆ ಸುಳ್ಯದ ಮೆಸ್ಕಾಂ ಬಳಿ ಇರುವ ಸಮೃದ್ಧಿ ಸಂಕೀರ್ಣದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಸುಳ್ಯ ಉಪಸಮಿತಿ ಹಾಗೂ ಮೆಸ್ಕಾಂ ಸುಳ್ಯ ಉಪವಿಭಾಗದ ವತಿಯಿಂದ ಸುಳ್ಯ ಉಪವಿಭಾಗ ವ್ಯಾಪ್ತಿಯ ಕೃಷಿಕರ ಆರ್ ಆರ್ ನಂಬರಿಗೆ ಆಧಾರ್ ನಂಬರ್ ಜೋಡಣೆ ಮತ್ತು ಹೆಸರು ಬದಲಾವಣೆ ಕಾರ್ಯಕ್ರಮ ನಡೆಯಲಿದೆ ಎಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
25.08.24 ಕೊನೆಯ ದಿನ ಆಗಿರುವುದರಿಂದ ಕೃಷಿಕರು ಇದರ ಪ್ರಯೋಜನ ಪಡಕೊಳ್ಳಬೇಕೆಂದು ವಿನಂತಿಸಿರುವ ಅವರು, ಕೃಷಿಕರು ಆಧಾರ್ ಲಿಂಕ್ ಮಾಡಲು ಬರುವಾಗ ತಮ್ಮ
ಆಧಾರ್ ಕಾರ್ಡ್ ಪ್ರತಿ, ಆರ್.ಟಿ.ಸಿ.,
ಪಂಪ್ ಸೆಟ್ RR ನಂಬರ್ ತರಬೇಕು. ಹೆಸರು ಬದಲಾವಣೆ ಮಾಡುವುದಿದ್ದರೆ ಇದರ ಜತೆಗೆ ಡೆತ್ ಸರ್ಟಿಫಿಕೇಟ್ ಅಥವಾ ಸೇಲ್ ಡೀಡ್ ಪ್ರತಿ, ರೇಷನ್ ಕಾರ್ಡ್, ಫೋಟೋ ತರಬೇಕೆಂದು ತಿಳಿಸಿದ್ದಾರೆ.