4 ದಿನಗಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೊಗರ್ಪಣೆ ಉರೂಸ್ ಸಮಾರಂಭಕ್ಕೆ ತೆರೆ

0

ಸಮಾರೋಪ ದುವಾ ಮಜ್ಲಿಸ್ ನಲ್ಲಿ ಸಾವಿರಾರು ಮಂದಿ ಭಾಗಿ

ಜೀವನದಲ್ಲಿ ಸಮಯಕ್ಕೆ ಪ್ರಾಮುಖ್ಯತೆ ಯನ್ನು ನೀಡಿ: ಇಬ್ರಾಹಿಂ ಸಖಾಫಿ ತಾತೂರ್

ಮೊಗರ್ಪಣೆ ಅಝ್ರತ್ ಮಾಂಬ್ಳಿ ವಲಿಯವರ ಮಖಾಂ ಉರೂಸ್ 4 ದಿನಗಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ 15 ರಂದು ಸಮಾಪನಗೊಂಡಿತು.

ಸಮಾರೋಪ ಸಮಾರಂಭದ ಸಾಮೂಹಿಕ ದುವಾ ಪ್ರಾರ್ಥನೆಗೆ ಖ್ಯಾತ ಧಾರ್ಮಿಕ ಪಂಡಿತ ಸಯ್ಯಿದ್ ಸಿಯ್ಯಾಬುದ್ದೀನ್ ತಂಙಳ್ ಅಲ್ ಬುಖಾರಿ ಕಡಲುಂಡಿ ರವರು ಭಾಗವಹಿಸಿ ಹಿತವಚನಗಳನ್ನು ನೀಡಿ ಪ್ರಾರ್ಥನೆಯನ್ನು ನೆರವೇರಿಸಿದರು.

ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಹಿರಿಯ ವಾಗ್ಮಿ ಇಬ್ರಾಹಿಂ ಸಖಾಫಿ ತಾತೂರ್ ರವರು ಮಾತನಾಡಿ ‘ಪ್ರತಿಯೊಬ್ಬರ ಜೀವನದಲ್ಲಿ ಸಮಯ ಎಂಬುವುದು ಬಹಳ ಮಹತ್ವ ಪೂರ್ಣವಾದದ್ದು. ನಮಗೆ ಜೀವಿಸಲು ದೇವರು ನೀಡಿದ ಸಮಯವನ್ನು ಅವನ ಆರಾಧನೆಗೂ ಅದೇ ರೀತಿ ಒಳಿತಿಗಾಗಿ ಬಳಸಿಕೊಳ್ಳಬೇಕು. ಯಾವ ಗಳಿಗೆಯಲ್ಲಿ ಒಬ್ಬ ವ್ಯಕ್ತಿಯ ಜೀವನ ಅಂತ್ಯ ವಾಗಬಹುದು ಎಂಬುವುದನ್ನು ಹೇಳಲು ಸಾಧ್ಯವಿಲ್ಲ.ಕಾಲ ಕಳೆದ ಮೇಲೆ ನಮಗೆ ಮತ್ತೊಮ್ಮೆ ಜೀವನ ಸರಿಪಡಿಸಲು ಅವಕಾಶ ಸಿಗುವುದಿಲ್ಲ.
ಇದನ್ನು ಪ್ರತಿಯೊಬ್ಬರು ಅರಿತು ಜೀವಿಸಬೇಕಾಗಿದೆ ಎಂದು ಅವರು ಹೇಳಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಹಾಫಿಲ್ ಶೌಖತ್ ಅಲಿ ಸಖಾಫಿಯವರ ನೇತೃತ್ವದಲ್ಲಿ ಮಾಂಬ್ಳಿ ವಲಿಯವರ ಹೆಸರಿನಲ್ಲಿ ಮೌಲೂದ್ ಪಾರಾಯಣ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ವಹಿಸಿದ್ದರು.

ವೇದಿಕೆಯಲ್ಲಿ ಉರೂಸ್ ಸ್ವಾಗತ ಸಮಿತಿ ಕನ್ವಿನರ್ ಹಾಜಿ ಅಬ್ದುಲ್ ರಜ್ಜಾಕ್ ಶೀತಲ್, ಸಯ್ಯದ್ ಝೈನುಲ್ ಆಬಿದಿನ್ ತಂಙಳ್ ಜಯನಗರ, ಹೆಚ್‌ಐಜೆ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ,ಕೋಶಾಧಿಕಾರಿ ಮಹಮ್ಮದ್ ಆದರ್ಶ, ಗಾಂಧಿನಗರ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್,ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ,ಅಲ್ ಅನ್ಸಾರ್ ಗಾಂಧಿನಗರ ಇದರ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಎಚ್ ಐ ಜೆ ಕಮಿಟಿ ಕಾರ್ಯದರ್ಶಿ ಎಸ್ ವೈ ಅಬ್ದುಲ್ ರಹಿಮಾನ್,ಜಯನಗರ ಮಸ್ಜಿದ್ ಮತ್ತು ಮದ್ರಸ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಜಯನಗರ,ಎನ್ ಐ ಎಂ ಮದ್ರಸ ಅಧ್ಯಾಪಕರುಗಳಾದ ಮೂಸಾ ಮುಸ್ಲಿಯಾರ್, ಅಬ್ದುಲ್ ರಶೀದ್ ಝೖನಿ ಯೂಸುಫ್ ನಿಝಮಿ , ಹಂಝ ಸಖಾಫಿ,ಅಬೂಬಕ್ಕರ್ ಸಿದ್ದಿಕ್ ಸಅದಿ, ಶಫೀಕ್ ಈಮಮಿ ಮತ್ತಿತರರು ಉಪಸ್ಥಿತರಿದ್ದರು.

ಕಟ್ಟಡ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್ ಸ್ವಾಗತಸಿ ಪ್ರಾಸ್ತವಿಕ ಮಾತನಾಡಿದರು. ಸದರ್ ಮುಅಲ್ಲಿಮ್ ಮುಅಲ್ಲೀಂ ಅಬ್ದುಲ್ ಕರೀಂ ಸಖಾಫಿ ವಂದಿಸಿದರು.

ಉರೂಸ್ ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.


ಮಸೀದಿ ಹಾಗೂ ದರ್ಗಾ ಪರಿಸರದಲ್ಲಿ ಪ್ರಗತಿ ಲೈಟಿಂಗ್ಸ್ ರವರ ನಿರ್ಮಿತ ಜಗಮಗಿಸಿದ ದೀಪಾಲಂಕಾರ,ಮುಖ್ಯ ರಸ್ತೆ ಬಳಿ ಮಸೀದಿ ಪರಿಸರದಲ್ಲಿ ಉರೂಸ್ ಸಮಾರಂಭಕ್ಕಾಗಿ ಇದ್ದ ಸಣ್ಣ ಪುಟ್ಟ ವ್ಯಪಾರಸ್ಥರ ಸಂತೆ ಮಳಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತು.