ಇತ್ತೀಚೆಗೆ ಆನೆ ದಾಳಿಗೆ ತುತ್ತಾದ ಗ್ಯಾರೇಜ್ ನೌಕರ ಕಲ್ಮಕಾರಿನ ಚರಿತ್ ಎಂಬವರಿಗೆ ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಸಹಾಯ ಹಸ್ತ ನೀಡುವ ಮೂಲಕ ದೈನಂದಿನ ಅಗತ್ಯ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು.
ಕಲ್ಮಕಾರಿನಲ್ಲಿರುವ ಅವರ ಮನೆಗೆ ತೆರಳಿ ಸಂಘದ ವತಿಯಿಂದ 1 ಕ್ವಿಂಟಾಲ್ ಅಕ್ಕಿ ಮತ್ತು ಅವಶ್ಯ ಆಹಾರ ವಸ್ತುಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಜನಾರ್ದನ ದೋಳ, ನಾಗೇಶ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.