ಅಜ್ಜಾವರ ಅಡ್ಕ ಅಲ್-ಅಮೀನ್ ಯಂಗ್ ಮೆನ್ಸ್ ಅಸೋಶಿಯೇಶನ್
ಮಹಾಸಭೆ
ಜ.13ರಂದು ಮಹಮ್ಮದ್ ಕುಂಞಿ ಕೆ.ಎ. ರವರ ಅಧ್ಯಕ್ಷತೆಯಲ್ಲಿ ರಿಫಾಯಿಯ್ಯಾ ಮಸ್ಜಿದ್ ಅಡ್ಕ ವಠಾರದಲ್ಲಿ ಜರಗಿತು.
ಅಲಿ ಮುಸ್ಲಿಯಾರ್ ಅಡೂರು ರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಅಲ್-ಅಮೀನ್ ಪ್ರ. ಕಾರ್ಯದರ್ಶಿ ಖಾದರ್ ಮಡಿಕೇರಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ಅಗಲಿದ ಅಲ್-ಅಮೀನ್ ಸದಸ್ಯರಿಗೆ ತಹ್ ಲೀಲ್ ಸಮರ್ಪಣೆ ನಡೆಸಲಾಯಿತು. 2025-2027ನೇ ಸಾಲಿನ ನೂತನ ಸಮಿತಿ ರಚಿಸಲಾಯ್ತು.
ಅಧ್ಯಕ್ಷರಾಗಿ – ಉಮ್ಮರ್ ಬಿ ಎಂ, ಪ್ರ. ಕಾರ್ಯದರ್ಶಿಯಾಗಿ- ಖಾದರ್ ತುಪ್ಪಕಲ್, ಕೋಶಧಿಕಾರಿ -ಅಬ್ದುಲ್ಲ ಸಿ ಹೆಚ್, ಉಪಾಧ್ಯಕ್ಷರಾಗಿ -ಖಾದರ್ ನೆಲ್ಯಡ್ಕ , ಜೊತೆ ಕಾರ್ಯದರ್ಶಿಯಾಗಿ – ಖಾದರ್ ಮಡಿಕೇರಿ, ಸಲೀಂ ಅಡ್ಕ
ಕಾರ್ಯಕಾರಿ ಸಮಿತಿ ಸದಸ್ಯರಾಗಿ – ಸಿದ್ದೀಕ್ ಅಡ್ಕ, ಹಾರಿಸ್ ಕಲ್ತಡ್ಕ, ಮುಹಮ್ಮದ್ ಶೆರೀಫ್ ಜಿ ಎಚ್, ಮುಹಮ್ಮದ್ ಕುಂಞ ಕೆ ಎ, ನುಹ್ಮಾನ್ ಶಿಬಿಲಿ, ಅಮೀನ್, ಜುನೈದ್ ಸಿ ಎಂ. ರವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ- ಯಾಕೂಬ್ ಜಿ ಎ, ಅಲಿ ಮುಸ್ಲಿಯಾರ್ ಅಡೂರು,.
ಲೆಕ್ಕ ಪರಿಶೋಧರಾಗಿ -ಅಬ್ಬಾಸ್ ತೋಣಿ ಯವರನ್ನು ಆಯ್ಕೆ ಮಾಡಲಾಯಿತು.
ಖಾದರ್ ಕೆ ಎಂ ರವರು ಸ್ವಾಗತಿಸಿ, ವಂದಿಸಿದರು.