ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣವೇಷ ಸ್ಪರ್ಧೆ ಜ್ಞಾನದೀಪ ವಿದ್ಯಾಸಂಸ್ಥೆಗಳ ಪ್ರಿ. ಕೆ. ಜಿ., ಎಲ್.ಕೆ.ಜಿ. ಹಾಗೂ ಯು.ಕೆ. ಜಿ. ವಿಭಾಗಗಳಿಗೆ ನಡೆಯಿತು.
ಈ ಸ್ಪರ್ಧೆಗಳಲ್ಲಿ ಒಟ್ಟು 36 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸ್ಪರ್ಧೆಗಳ ನಿರ್ಣಾಯಕರುಗಳಾಗಿ ಶಾಲಾ ವಿಜ್ಞಾನ ಶಿಕ್ಷಕಿ ಉಷಾ ಮಾತಾಜಿ, ಸಮಾಜ ವಿಜ್ಞಾನ ಶಿಕ್ಷಕಿ ರಚಿತಾ, ಶಾಲಾ ಐ.ಸಿ. ಎಸ್.ಇ. ವಿಭಾಗದ ಶಿಕ್ಷಕಿ ಪ್ರಮಿತಾ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ- ರಕ್ಷಕ ಸಂಘದ ಸದಸ್ಯರುಗಳು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.