ಯೋಗಾಸನದಲ್ಲಿ ಪಂಜದ ಸಾನ್ವಿ ದೊಡ್ಡಮನೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ದ. ಕ. ಜಿ. ಪಂ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಕಡಬ ಜಂಟಿ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಯೋಗಾಸನ ಸ್ಪರ್ಧೆ ಕಡಬ ಸರಸ್ವತಿ ವಿದ್ಯಾಲಯ ದಲ್ಲಿ ಆ.23ರಂದು ನಡೆಯಿತು.

14 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕ್ನಾನಾಯಾ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ದೊಡ್ಡಮನೆ ಪಂಜ ಪ್ರಥಮ ಸ್ಥಾನದಲ್ಲಿ ಚಿನ್ನದ ಪದಕ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಶ್ರೀ ಮೂಕಾಂಬಿಕಾ ಮಾರುತಿ ಆಟೋ ವರ್ಕ್ಸ್ ಕಡಬ ಮಾಲಕ ನಿತ್ಯಾನಂದ ದೊಡ್ಡ ಮನೆ ಹಾಗೂ ಸೀತಾಲಕ್ಷ್ಮಿ ದಂಪತಿಯ ಪುತ್ರಿ, ಗುರುಗಳಾದ ಸಂತೋಷ್ ಮೂಡುಕಜೆ ಹಾಗೂ ಪ್ರಶ್ವಿಜಾ (ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ) ಇವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ.