ಯಕ್ಷಗಾನ ಕಲಾವಿದ,ಸಂಘಟಕ, ಸಂಯೋಜಕ ಶೇಖರ ಮಣಿಯಾಣಿ ಯವರ ಚಿಕಿತ್ಸೆಗೆ ನೆರವಿನ ಯಾಚನೆ

0

ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಅವಿರತ ಸೇವೆಯನ್ನು ನೀಡುವುದರೊಂದಿಗೆ ನಿರಂತರವಾಗಿ ಯಕ್ಷಗಾನ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟ ಸುಳ್ಯದ ಯಕ್ಷರಂಗದ ಮೇರು ಕಲಾವಿದ ,ಸಂಘಟಕ, ಯಕ್ಷ ಗುರು ಎಂದೆನಿಸಿಕೊಂಡಿರುವ ಕಲ್ಲುಮುಟ್ಲುವಿನ ಶೇಖರ ಮಣಿಯಾಣಿ ಯವರು ಅನಾರೋಗ್ಯಕ್ಕೆ ತುತ್ತಾಗಿದ್ದು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ವೈದ್ಯರ ಸಲಹೆಯಂತೆ ಅವರಿಗೆ ಮೌತ್ ಕ್ಯಾನ್ಸರ್ ಕಾಣಿಸಿಕೊಂಡಿರುವುದರಿಂದ ಅವಶ್ಯಕವಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದ್ದು ಸುಮಾರು 3-4 ಲಕ್ಷ ವೆಚ್ಚ ತಗುಲಲಿದೆ.


ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಕಲಾವಿದರನ್ನು ಸೇರಿಸಿಕೊಂಡು ಯಕ್ಷಗಾನ ‌ಕಲೆಯನ್ನು ಉಳಿಸಿ ಬೆಳೆಸುವ ಸಲುವಾಗಿ ತನ್ನ ಕೈಯಿಂದಲೇ ಖರ್ಚು ಭರಿಸಿಕೊಂಡು ಕಲೆಯನ್ನು ಬೆಳೆಸಿದವರು. ಮಳೆಗಾಲದಲ್ಲಿ ಮನೆ ಮನೆ ಯಕ್ಷಗಾನದ ಮೂಲಕ ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯ ಮೇಲೆ ಆಸಕ್ತಿ ಮೂಡುವಂತೆ ಮಾಡಿದವರು. ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ ಮಕ್ಕಳ ಯಕ್ಷಗಾನ ತಂಡವನ್ನು ರಚಿಸಿದವರು. ಯಕ್ಷ ಅಭಿಮಾನಿಗಳನ್ನು ಸಂಘಟಿಸಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಎಂಬ ವಿನೂತನ ಕಾರ್ಯಕ್ರಮ ಸಂಯೋಜಸಿದವರು.


ವೃತ್ತಿಯಲ್ಲಿ ಒಬ್ಬ ಪ್ರತಿಭಾವಂತ ಯಕ್ಷ, ಚಿತ್ರ ಕಲಾವಿದನಾಗಿ ಗುರುತಿಸಿ ಕೊಂಡರೂ ಆರ್ಥಿಕತೆಯಲ್ಲಿ ಅತ್ಯಂತ ಬಡಪಾಯಿ ಕಲಾವಿದರಿವರು.
ಆದ್ದರಿಂದ ಅನಾರೋಗ್ಯದಿಂದ ಬಳಲಿದ ಜೀವಕ್ಕೆ ಮತ್ತೆ ಬಲ ತುಂಬುವ ಕಾರ್ಯಕ್ಕೆ ಕಲಾಭಿಮಾನಿಗಳು ಹಾಗೂ ಸಹೃದಯಿಗಳು ಕೈ ಜೋಡಿಸಬೇಕಾಗಿದೆ.

ಚೆಂಡೆ ಮದ್ದಲೆ ಬಾರಿಸಿದ ಕೈಗಳಿಗೆ ಮತ್ತೆ ಶಕ್ತಿ ತುಂಬುವ ಕಾರ್ಯ ಮಾಡಬೇಕಾಗಿದೆ.
ತಮ್ಮ ಕೈಲಾದಷ್ಟು ಕೆಳಗೆ ನಮೂದಿಸಿದ ಖಾತೆಗೆ ಜಮೆ ಮಾಡಿ ಸಹಕಾರ ನೀಡುವಂತೆ ಮನವಿ.

Raviprakash ng
Canarabank
A/c01392200071050
Ifsc CNRB0010139
S. B a/c
Mo. :9110862394 ponepay gpay
8904328321 gpay ponepay