ಐಶ್ವರ್ಯ ಆತ್ಮಹತ್ಯೆ ಪ್ರಕರಣ : ಹೈಕೋರ್ಟಲ್ಲಿ ವಾದಿಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಎಂ.ಎಸ್.ಶ್ಯಾಮ್ ಸುಂದರ್ ನೇಮಕ

0

ಬೆಂಗಳೂರಲ್ಲಿ ನೆಲೆಸಿರುವ ಉಬರಡ್ಕದ ಮದುವೆಗದ್ದೆ ಎಂ.ಎಸ್.ಸುಬ್ರಹ್ಮಣ್ಯ – ಉಷಾ ದಂಪತಿಯ ಪುತ್ರಿ ಶ್ರೀಮತಿ ಐಶ್ವರ್ಯ ರವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಗೋವಿಂದನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈಂ ನಂಬರ್ 0412 ರಲ್ಲಿ ಸರಕಾರದ ಪರವಾಗಿ ಹೈಕೋರ್ಟಲ್ಲಿ ವಾದಿಸಲು ಬೆಂಗಳೂರಿನ ಹಿರಿಯ ನ್ಯಾಯವಾದಿ ಎಂ.ಎಸ್.ಶ್ಯಾಮ್ ಸುಂದರ್ ರವರನ್ನು ಸರಕಾರ ನೇಮಿಸಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ಕೆಳ ನ್ಯಾಯಾಲಯದಲ್ಲಿ‌ ವಾದಿಸುವುದಕ್ಕೂ ಶ್ಯಾಮ್ ಸುಂದರ್ ರವರನ್ನು ಸರಕಾರ ನೇಮಿಸಿತ್ತು.

ಎಂ.ಎಸ್.ಸುಬ್ರಹ್ಮಣ್ಯರ ಪುತ್ರಿ ಶ್ರೀಮತಿ ಐಶ್ವರ್ಯ ರವರು ಡೈರಿ ರಿಚ್ ಸಂಸ್ಥೆಯ ಮಾಲಕ ಕಾಪಿಲ ಗಿರಿಯಪ್ಪ ಗೌಡರ ಪುತ್ರ ರಾಜೇಶರ ಪತ್ನಿಯಾಗಿದ್ದು, 2023 ಅಕ್ಟೋಬರ್ 26 ರಂದು ಬೆಂಗಳೂರಲ್ಲಿರುವ ತಂದೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಮನೆಯವರು ಮತ್ತು ಸೋದರ ಮಾವನ ಮನೆಯವರು ನೀಡಿದ ಕಿರುಕುಳದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಐಶ್ವರ್ಯ ವಿವರವಾದ ಡೆತ್ ನೋಟ್ ಬರೆದಿಟ್ಟಿದ್ದರಿಂದ ಅವರೆಲ್ಲರ ಮೇಲೆ ಕೇಸು ದಾಖಲಾಗಿ ಗಿರಿಯಪ್ಪ ಗೌಡ ಮತ್ತು ಅವರ ಮನೆಯವರ ಬಂಧನವೂ ನಡೆದಿತ್ತು. ಬಳಿಕ ಅವರು ಹೈಕೋರ್ಟಿಂದ ಜಾಮೀನು ಪಡೆದುಕೊಂಡಿದ್ದರು.
ಅಲ್ಲದೆ ಐಶ್ವರ್ಯ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಮೇಲೆ ಹಾಕಲಾಗಿರುವ ಎಫ್.ಐ.ಆರ್. ಅನ್ನು ರದ್ದುಗೊಳಿಸಬೇಕೆಂದು ಗಿರಿಯಪ್ಪ ಗೌಡ ಫ್ಯಾಮಿಲಿ ಹಾಗೂ ಓಂಪ್ರಕಾಶ್ ಫ್ಯಾಮಿಲಿ ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು. ಇದು ವಿಚಾರಣೆಗೆ ಪೆಂಡಿಂಗ್ ಇತ್ತು.
ಇದೀಗ ಹೈಕೋರ್ಟಲ್ಲಿ ಈ ಕೇಸನ್ನು ಮುನ್ನಡೆಸಲು ಶ್ಯಾಮಸುಂದರ್ ರವರನ್ನು ನೇಮಿಸಿ ಸರಕಾರ ನೇಮಿಸಿರುವುದರಿಂದ ಪ್ರಕರಣದ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.