ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾದ ಹವೀಕ್ಷ ಎಸ್. ಆರ್.

0

ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ ಹಾಗೂ ಪಯಸ್ವಿನಿ ಅನುದಾನಿತ ಪ್ರೌಢಶಾಲೆ ಜಾಲ್ಸೂರು ಇದರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಯೋಗಾಸನ ಸ್ಪರ್ಧೆ 24 ಆಗಸ್ಟ್ 2024 ಶನಿವಾರ ದಂದು ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರು ನಲ್ಲಿ ಆಯೋಜಿಸಲಾಗಿತ್ತು.

ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಹರಿಹರ ಪಲ್ಲತಡ್ಕದ ರೋಹಿತಾಕ್ಷ ಎಸ್. ಟಿ ಹಾಗೂ ಶ್ರೀಮತಿ ಶ್ರೀಲತಾ ಎಸ್. ಆರ್ ದಂಪತಿಯ ಪುತ್ರಿ ಕುl ಹವೀಕ್ಷ ಎಸ್. ಆರ್. ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಈಕೆ ಸ. ಮಾ. ಹಿ. ಪ್ರಾ. ಶಾಲೆ ಗುತ್ತಿಗಾರಿನ ವಿದ್ಯಾರ್ಥಿನಿಯಾಗಿದ್ದು, ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದಲ್ಲಿ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ಇವರಿಂದ ಯೋಗ ತರಬೇತಿಯನ್ನು ಪಡೆಯುತ್ತಿದ್ದಾರೆ.