ಸುದ್ದಿ ಸಮೂಹ ಸಂಸ್ಥೆ ಮತ್ತು ಷರಾ ಪ್ರಕಾಶನ ಸುಳ್ಯ ವತಿಯಿಂದ ನಡೆದ ದೇಶ ಭಕ್ತಿ ಗಾಯನ ಸ್ಪರ್ಧೆ

0

15 ಶಾಲಾ ತಂಡಗಳು ಅಂತಿಮ ಹಂತಕ್ಕೆ ಆಯ್ಕೆ; ಸುದ್ದಿ ಸ್ಟುಡಿಯೋದಲ್ಲಿ ಅಂತಿಮ ಸ್ಪರ್ಧೆ

ಸುದ್ದಿ ಸಮೂಹ ಸಂಸ್ಥೆಗಳು ಸುಳ್ಯ ಮತ್ತು ಷರಾ ಪ್ರಕಾಶನ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ೭೮ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸುಳ್ಯ ತಾಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ದೇಶ ಭಕ್ತಿ ಗಾಯನ ಸ್ಪರ್ಧೆ-೨೦೨೪ ಇದರ ಅಂತಿಮ ಸ್ಪರ್ಧೆ ಇಂದು ಸುಳ್ಯದ ಸುದ್ದಿ ಚಾನೆಲ್ ನಲ್ಲಿ ನಡೆಯಿತು.

ಸ್ಪರ್ಧೆಯ ಉದ್ಘಾಟನೆಯನ್ನು ಷರಾ ಪ್ರಕಾಶನದ ಡಾ. ಜಯಮಣಿ ಲೀಲಾಧರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ನಿರ್ಣಾಯಕರುಗಳಾಗಿ ಖ್ಯಾತ ಗಾಯಕಿ, ಸುಳ್ಯ ರಂಗಮೂರಿ ಕಲಾ ಶಾಲೆಯ ಸಂಗೀತ ಶಿಕ್ಷಕಿ ಪುತ್ತೂರಿನ ಸುಮನ ರಾವ್ ಹಾಗೂ ಕಲಾ ಸಂಘಟಕಿ, ಲೇಖಕಿ ಲತಾ ಸುಪ್ರೀತ್ ಮೋಂಟಡ್ಕ ಸಹಕರಿಸಿದರು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಕುಮಾರ್ ನಾಯರ್ ಕೆರೆ, ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಶ್ರೀಧರ್ ಕಜೆಗದ್ದೆ, ಚಾನೆಲ್ ತಾಂತ್ರಿಕ ವಿಭಾಗದ ಮುಖ್ಯಸ್ಥ ಶ್ರೀಧಾಮ ಅಡ್ಕಾರ್, ಜಾಹೀರಾತು ವಿಭಾಗದ ಈಶ್ವರ ವಾರಣಾಶಿ, ಸುದ್ದಿ ವರದಿಗಾರ ಶಿಪ್ರಸಾದ್ ಆಲೆಟ್ಟಿ, ಸುದ್ದಿಯ ಸಿಬ್ಬಂದಿಗಳಾದ ಚೈತ್ರ ಮುಳ್ಯ, ರೇಖಾ ಸುಭಾಶ್, ಪ್ರಜ್ಞಾ ಎಸ್.ನಾರಾಯಣ್ ಉಪಸ್ಥಿತರಿದ್ದರು.

ಸ್ಪರ್ಧೆಯ ಸಂಯೋಜಕರುಗಳಾದ ದಯಾನಂದ ಕೊರತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ಜಟ್ಟಿಪಳ್ಳ ಸ್ವಾಗತಿಸಿದರು.

ಅನಿಲ್ ಕಳಂಜ, ಜಯಶ್ರೀ ಜಯನಗರ, ಅನಿಲ್ ಸಂಪ, ಕೌಶಿಕ್ ರಾಂ, ಯತೀಶ್ ಕದ್ರ, ಶ್ರೀಜಿತ್ ಸಂಪಾಜೆ, ರಕ್ಷಿತ್ ಕುಕ್ಕುಜಡ್ಕ , ಪೂಜಾಶ್ರೀ ಪೈಚಾರ್ ಸಹಕರಿಸಿದರು.
ಸ್ಪರ್ಧಾ ಫಲಿತಾಂಶ ನಾಳೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಘೋಷಿಸಲಾಗುವುದು.