ಚೆಂಬು: ಅತ್ಯಾಡಿಯಲ್ಲಿ ಪ್ರಣವ ಫೌಂಡೇಶನ್ ವತಿಯಿಂದ ತೂಗು ಸೇತುವೆಯ ಹಸ್ತಾಂತರ

0

ಚೆಂಬು ಗ್ರಾಮದ ಅತ್ಯಾಡಿಯಲ್ಲಿ ಉಂಬಳೆ ಹೊಳೆಗೆ ಅಡ್ಡಲಾಗಿ ಬೆಂಗಳೂರಿನ ಪ್ರಣವ ಫೌಂಡೇಶನ್ ವತಿಯಿಂದ ತೂಗುಸೇತುವೆ ನಿರ್ಮಾಣ ಮಾಡಿಕೊಡುವ ಮೂಲಕ ಗ್ರಾಮೀಣ ಜನರಿಗೆ ಆಸರೆಯಾಗಿದೆ.

ಅತ್ಯಾಡಿಯಲ್ಲಿ ಉಂಬಳೆ ಹೊಳೆ ಹರಿಯುತ್ತಿದ್ದು, ಇದರ ಆ ಬದಿಗೆ ಸುಮಾರು ಹತ್ತು ಕುಟುಂಬಗಳು ವಾಸಿಸುತ್ತಿದ್ದು, ಮಳೆಗಾಲದಲ್ಲಿ ಅಡಿಕೆ ಮರದ ಪಾಲದ ಮೂಲಕ ಜನರು ಜೀವ ಭಯದಲ್ಲಿ ಹೊಳೆ ದಾಟುತ್ತಿದ್ದರು.

ಈ ಬಗ್ಗೆ ‘ಸುದ್ದಿ’ ಚಾನೆಲ್ ಹಾಗೂ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದ ಬೆಂಗಳೂರಿನ ಪ್ರಣವ ಫೌಂಡೇಶನ್ ಸಂಸ್ಥೆಯವರು ಕೊಡಗಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್, ಕೊಡಗಿನ ಟೀಮ್ 12 ಆಫ್ ರೋಡರ್ಸ್ ಹಾಗೂ ಬೆಂಗಳೂರಿನ ಮಲ್ನಾಡ್ ಯೂತ್ ಅಸೋಸಿಯೇಷನ್ ಸಹಕಾರದೊಂದಿಗೆ ಪ್ರಣವ ಫೌಂಡೇಶನ್ ನ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಸುಳ್ಯದ ಆಯಶ್ಶಿಲ್ಪ ಗ್ರಾಮ ಭಾರತ ಸಂಪರ್ಕ ಸಂಸ್ಥೆಯ ಸಹಕಾರದೊಂದಿಗೆ ಚೆಂಬು ಗ್ರಾಮದ ಅತ್ಯಾಡಿಯಲ್ಲಿ ತೂಗು ಸೇತುವೆ ನಿರ್ಮಾಣ ಕಾರ್ಯ ಮಾಡಿದ್ದರು.

ಇದರ ಉದ್ಘಾಟನಾ ಕಾರ್ಯವು ಆ.25ರಂದು ಅತ್ಯಾಡಿಯಲ್ಲಿ ನಡೆಯಿತು. ಅತ್ಯಾಡಿ ಗ್ರಾಮಸ್ಥರಾದ ಶ್ರೀಮತಿ ಅನಿತಾ ಎ.ಎಸ್. ಅವರು ದೀಪಪ್ರಜ್ವಲನೆ ಮಾಡಿ , ಚೆಂಬು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಮತಿ ತಾರಾವತಿ ಅತ್ಯಾಡಿ ಹಾಗೂ ಅತ್ಯಾಡಿ ಮಾದಪ್ಪ ಅವರು ತೂಗು ಸೇತುವೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರಣವ ಫೌಂಡೇಶನ್ ಅಧ್ಯಕ್ಷ ರಾಕೇಶ್ ರೈ, ಸ್ಥಾಪಕ ಕಾರ್ಯದರ್ಶಿ ನಾಗರಾಜ ಹೆಬ್ಬಾಳ್, ಟ್ರಸ್ಟಿಗಳಾದ ಮಂಜುನಾಥ್ ಭಟ್, ರಕ್ಷಿತ್ ಕೆ‌.ಪಿ., ನೇತ್ರ ಎನ್., ಮಹೇಶ್ ರೈ ಮೇನಾಲ, ದೇವಿಪ್ರಸಾದ್ ಅತ್ಯಾಡಿ, ಕಾರ್ತಿಕ್ ಭಟ್, ಮಲ್ನಾಡ್ ಯೂತ್ ಅಸೋಸಿಯೇಷನ್ ಅರುಣ್ ಕೊತ್ನಳ್ಳಿ, ಪ್ರೇಮ್ ಸಾಗರ್, ಅಚಲ್, ಶ್ರೀನಿಧಿ ಲಿಂಗಪ್ಪ, ಸರ್ಜನ್ ಮಂದಣ್ಣ, ಮೋಹಿತ್ ತಮ್ಮಯ್ಯ, ಸಮರ್ಥ್, ವಿನಯ್ ಕುಶಾಲಪ್ಪ, ಆದರ್ಶ್ ತಮ್ಮಯ್ಯ, ಅತ್ಯಾಡಿ ನಿವಾಸಿಗಳಾದ ಪ್ರಕಾಶ್ ಅತ್ಯಾಡಿ, ಮನೋಜ್ ಕುಮಾರ್ ಅತ್ಯಾಡಿ, ಹರೀಶ್ ಉಂಬಳೆ, ರಾಧಾಕೃಷ್ಣ ಅತ್ಯಾಡಿ, ಸತೀಶ್ ನಾಯ್ಕ ಉಂಬಳೆ, ಗಿನಿಲ್ ಕುಮಾರ್ ಕಾಳಪ್ಪಕಜೆ, ವಸಂತ ಕುಮಾರ್ ಅತ್ಯಾಡಿ, ಶೇಷಪ್ಪ ಅತ್ಯಾಡಿ ಸೇರಿದಂತೆ ಮತ್ತಿತರ ಗ್ರಾಮಸ್ಥರು ಉಪಸ್ಥಿತರಿದ್ದರು.