ಆ 29 : ಅರಂತೋಡಿನಲ್ಲಿ “ಮಾಹಿತಿ- ಮಂಥನ ರೈತ ಸಂವಾದ ಮತ್ತು ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಕಾರ್ಯಕ್ರಮ

0

ಅರಂತೋಡು ಗ್ರಾಂ.ಪಂ , ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇನ್ನರ್ ವೀಲ್ ಕ್ಲಬ್ ಸುಳ್ಯ , ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ,ಪುತ್ತೂರು ಮತ್ತು ಮಂಗಳೂರು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ಅಂಧತ್ವ ) ವಿಭಾಗ ಮಂಗಳೂರು ಜಂಟಿ ಆಶ್ರಯದಲ್ಲಿ ( ಸಮಗ್ರ ಬೆಳೆ ನಿರ್ವಹಣೆ ಕುರಿತು”ಮಾಹಿತಿ ಮಂಥನ, ರೈತ ಸಂವಾದ ಕಾರ್ಯಕ್ರಮ , ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ “(ಆ.29)ರಂದು ಅರಂತೋಡು
ಗ್ರಾಮಪಂಚಾಯತ್ ನ ಅಮೃತಾ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ ವಹಿಸಲಿದ್ದಾರೆ.
ಉದ್ಘಾಟನೆಯನ್ನು ಗ್ರಾಂ. ಪಂ .ಅಧ್ಯಕ್ಷ ಕೇಶವ ಅಡ್ತಲೆ ನಿರ್ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸಿದ್ಧಿ ಎಂ.ಗ್ರೀ . ಕೆಂ ಪ್ರೈವೇಟ್ ಲಿಮಿಟೆಡ್ ಇಂದೋರ್, ಮುಖ್ಯ ಅತಿಥಿಗಳು ಉಪಸ್ಥಿತಿಯಲ್ಲಿದ್ದಾರೆ.ಬಳಿಕ ಕೃಷಿಕರ ಪರ ಅಡಿಕೆ ಮತ್ತು ಕಾಳುಮೆಣಸು ಬೆಳೆಯ ಸಮಗ್ರ ನಿರ್ವಹಣೆಯ ಕುರಿತು ವಿಜ್ಞಾನಿಗಳಿಂದ ಮಾಹಿತಿ ಹಾಗೂ ರೈತ ಸಂವಾದ ಕಾರ್ಯಕ್ರಮ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ತಿಳಿಸಿದ್ದಾರೆ.

ನೇತ್ರ ತಪಾಸಣೆ ಶಿಬಿರದ ವಿಶೇಷತೆಗಳು:

ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು.

ಅಗತ್ಯ ವುಳ್ಳ ವರಿಗೆ ಉಚಿತ ಕಣ್ಣಿನ ಪೊರೆ ಚಿಕಿತ್ಸೆ

ರಿಯಾಯಿತಿ ದರದಲ್ಲಿ ಕಣ್ಣಿನ ಕನ್ನಡಕ ವಿತರಣೆ