ಅಖಿಲ ಭಾರತ ಕ್ಯಾಥೋಲಿಕ್ ಯುನಿವರ್ಸಿಟಿ ಫೆಡರೇಷನ್ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾಗಿ ಸೋಹನ್ ಆಸ್ಟಿನ್ ಮಸ್ಕರೇಂಞಸ್ ಆಯ್ಕೆ

0

ಅಖಿಲ ಭಾರತ ಕ್ಯಾಥೋಲಿಕ್ ಯುನಿವರ್ಸಿಟಿ ಫೆಡರೇಷನ್(AICUF) ಇದರ ಕರ್ನಾಟಕ ರಾಜ್ಯದ ವಿದ್ಯಾರ್ಥಿ ಸಂಘ ಇದರ 2024-25ನೇ ಸಾಲಿನ ರಾಜ್ಯಾಧ್ಯಕ್ಷರಾಗಿ ಸೋಹನ್ ಆಸ್ಟಿನ್ ಮಸ್ಕರೇಂಞಸರವರು ನೇಮಕಗೊಂಡಿದ್ದಾರೆ.

ಆ. 9 ರಂದು ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳ ನಾಲ್ವರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಸೋಹನ್ ಆಸ್ಟಿನ್ ಮಸ್ಕರೇಂಞಸ್ ಇವರು ಅಧಿಕ ಮತಗಳನ್ನು ಪಡೆದು ವಿಜಯಶಾಲಿಯಾಗಿರುತ್ತಾರೆ.

ಇವರು ಪ್ರಸ್ತುತ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಇಲ್ಲಿ ತೃತೀಯ ವರ್ಷದ ಬಿ ಇ (ಕಂಪ್ಯೂಟರ್ ಸೈನ್ಸ್) ವ್ಯಾಸಂಗ ಮಾಡುತ್ತಿದ್ದು, ಈ ಕಾಲೇಜಿನ AICUFನ ಘಟಕಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ಬೀರಮಂಗಲದ ವಿದ್ಯುತ್ ಗುತ್ತಿಗೆದಾರರಾಗಿರುವ ಸುನಿಲ್ ಮಸ್ಕರೇಂಞಸ್ ಮತ್ತು ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಅನಿತಾ ಮಸ್ಕರೇಂಞಸ್ ಇವರ ಸುಪುತ್ರ. ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಸುಳ್ಯ ಮತ್ತು ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರು ಇಲ್ಲಿಯ ಹಳೆ ವಿದ್ಯಾರ್ಥಿ.