ಸಂಪಾಜೆ ವಲಯದ ಭಜನಾ ಪರಿಷತ್ ಸಭೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಸಂಪಾಜೆ ವಲಯ. ಭಜನಾ ಪರಿಷತ್ ಸುಳ್ಯ ತಾಲೂಕು ಸಂಪಾಜೆ ವಲಯ ಇದರ ಸಭೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು.

ದುರ್ಗಾ ಮಾತಾ ಭಜನಾ ಮಂದಿರದ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ಅಧ್ಯಕ್ಷರಾದ ಕೆ ಆರ್ ಪದ್ಮನಾಭ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿ ಟಿ ಎನ್ ಸತೀಶ್ ಮಾತನಾಡಿ, ಭಜನಾ ಕಮ್ಮಟದ ಬಗ್ಗೆ ಹಾಗೂ ವಲಯದಲ್ಲಿ ನಡೆಯುವ ಭಜನೋತ್ಸವ ಬಗ್ಗೆ ಮಾಹಿತಿಯನ್ನು ನೀಡಿದರು ನಂತರ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಯವರ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ತೀರ್ಥರಾಮ ಆಡ್ಕಬಳೆ, ಉಪಾಧ್ಯಕ್ಷರಾಗಿ ಯತೀಶ್ ಕಂಜಿಪಿಲಿ, ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಕಜೆ,ಜೊತೆ ಕಾರ್ಯದರ್ಶಿಯಾಗಿ ರತ್ನಾಕರ ರೈ ಅರಂಬೂರು,ಕೋಶಾಧಿಕಾರಿಯಾಗಿ ಶ್ರೀಮತಿ ಭಾರತಿ ಪುರುಷೋತ್ತಮ ಉಳವಾರು ಆಯ್ಕೆಯಾದರು. ತಾಲೂಕು ಭಜನಾ ಪರಿಷತ್ತಿನ ನಿರ್ದೇಶಕರಾದ ಸೋಮಶೇಖರ ಪೈಕ ಇವರು ಮಾತನಾಡುತ್ತಾ ಭಜನೆಯ ಮಹತ್ವ ಹಾಗೂ ಮುಂದಿನ ದಿನ ದಲ್ಲಿ ವಲಯದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಮಾಹಿತಿ ನೀಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತೀರ್ಥರಾಮ ಅಡ್ಕಬಳೆ ಅವರು ಎಲ್ಲರೂ ಸಂಘಟಿಕರಾಗಿ ಕಾರ್ಯಕ್ರಮವನ್ನು ಮುನ್ನಡೆಸೋಣ ಹಾಗೂ ಎಲ್ಲರ ಸಹಕಾರವನ್ನು ಕೋರಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಭಜನಾ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಲಯದ ಸೇವಾಪ್ರತಿನಿಧಿ ಅವರು ಉಪಸ್ಥಿತರಿದ್ದರು.

ಸೇವ ಪ್ರತಿನಿಧಿ ನಿತ್ಯಾನಂದ ಸ್ವಾಗತಿಸಿ , ಸೇವಾ ಪ್ರತಿನಿಧಿ ಶ್ರೀಮತಿ ತಾರಾರವರು ವಂದಿಸಿದರು. ಹಾಗೂ

ವಲಯದ ಮೇಲ್ವಿಚಾರಕರಾದ ಗಂಗಾಧರ ರವರು ಕಾರ್ಯಕ್ರಮ ನಿರೂಪಿಸಿದರು.