ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಐವನ್ ಡಿಸೋಜಾ ರವರ ಮೇಲೆ ಕೇಸು ದಾಖಲಿಸುವಂತೆ ಒತ್ತಾಯ
ರಾಜ್ಯ ಸರಕಾರದ ಮೂಡಾ ಹಗರಣದ ವಿರುದ್ಧ ರಾಜ್ಯ ಪಾಲರು ಪ್ರಾಸಿಕ್ಯೂಸನ್ ಅವಕಾಶ ನೀಡಿರುವುದು ಅಪರಾಧದವೆಂಬಂತೆ ಬಿಂಬಿಸಿ ಸಂವಿಧಾನದ ಕ್ರಿಯೆಗೆ ಅಡ್ಡಿ ಪಡಿಸಿರುವುದಲ್ಲದೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ
ರಾಜ್ಯ ಪಾಲರನ್ನೇ ಓಡಿಸುತ್ತೇವೆ ಎಂಬ ಕೀಳು ಭಾವನೆ ವ್ಯಕ್ತಪಡಿಸಿ ಅವಹೇಳನಕಾರಿ ಪದ ಬಳಕೆ ಮಾಡಿರುವುದು ವುದನ್ನು ಖಂಡಿಸಿ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ವತಿಯಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ತಕ್ಷಣ ಪೋಲಿಸ್ ಇಲಾಖೆ ಕಾನೂನಾತ್ಮಕವಾಗಿ ಐವನ್ ಡಿಸೋಜಾ ಮೇಲೆ ಎಫ್ .ಐ.ಆರ್.ದಾಖಲಿಸಬೇಕು. ಮೂಡಾ ಹಗರಣ ಮತ್ತು ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವ ಕಾಂಗ್ರೆಸ್ ಸರಕಾರ ನೈತಿಕ ಹೊಣೆ ಹೊತ್ತು ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವರು ರಾಜೀನಾಮೆ ನೀಡಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು.ಬಳಿಕ
ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಹಾಗೂ ಐವನ್ ಡಿಸೋಜ ರ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು. ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಯುವ ಮೋರ್ಚಾದ ವತಿಯಿಂದ ಉಗ್ರ ರೀತಿಯ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಖಾಸಗಿ ಬಸ್ ನಿಲ್ದಾಣ ದಲ್ಲಿ ಪ್ರತಿಭಟನೆ
ಆರಂಭವಾಗಿ ಮಾತನಾಡುತ್ತಿರುವಾಗ ಜೋರಾಗಿ ಮಳೆ ಸುರಿಯಲಾರಂಭಿಸಿತು. ಮಳೆಯನ್ನು ಲೆಕ್ಕಿಸದೆ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲಾ ಕಾರ್ಯಕರ್ತರು ಮಳೆಯಲ್ಲಿ ನೆನೆದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಳಿಕ ಸಾಂಕೇತಿಕವಾಗಿ ರಸ್ತೆ ತಡೆಗೆ ಬರುವ ಸಂದರ್ಭದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಪ್ರತಿಭಟನೆಯಲ್ಲಿ ಸೇರಿಕೊಂಡರು.
ಪ್ರಮುಖರಾದ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ವಿರೂಪಾಕ್ಷ ಭಟ್, ಶ್ರೀ ಕೃಷ್ಣ ಎಂ.ಆರ್, ಮನುದೇವ ಪರಮಲೆ, ಹರ್ಷಿತ್ ಪೆರುವಾಜೆ, ಹರೀಶ್ ಕಂಜಿಪಿಲಿ, ವಿನಯಕುಮಾರ್ ಕಂದಡ್ಕ, ವಿಕ್ರಮ್ ಅಡ್ಪಂಗಾಯ, ಬೂಡು ರಾಧಾಕೃಷ್ಣ ರೈ,ಬುದ್ದ ನಾಯ್ಕ,ಸುಭೋದ್ ಶೆಟ್ಟಿ ಮೇನಾಲ, ರಾಜೇಶ್ ಶೆಟ್ಟಿ ಮೇನಾಲ, ಸೋಮನಾಥ ಪೂಜಾರಿ, ಎ.ಟಿ.ಕುಸುಮಾಧರ, ರಾಜೇಶ್ ಕಿರಿಭಾಗ, ಶೀನಪ್ಪ ಬಯಂಬು, ಸುನಿಲ್ ಕೇರ್ಪಳ, ಶಿವರಾಮ ಕೇರ್ಪಳ,
ಶಶಿಕಲಾ ನೀರಬಿದಿರೆ, ಗುಣವತಿ ಕೊಲ್ಲಂತಡ್ಕ, ಶೀಲಾ ಅರಣ ಕುರುಂಜಿ, ಕಿಶೋರಿ ಶೇಟ್,ಶಿಲ್ಪಾ ಸುದೇವ್, ಸುಧಾಕರ ಕೇರ್ಪಳ, ನಾರಾಯಣ ಶಾಂತಿನಗರ, ಸುಶೀಲಾ ಕಲ್ಲುಮುಟ್ಲು, ಸುದರ್ಶನ ಪಾತಿಕಲ್ಲು ಮತ್ತಿತರರು ಉಪಸ್ಥಿತರಿದ್ದರು. ಯುವ ಮೋರ್ಚಾದ ಗ್ರಾಮ ಸಮಿತಿ ಅಧ್ಯಕ್ಷ ಪ್ರದೀಪ್ ಕೊಲ್ಲರಮೂಲೆ ಸ್ವಾಗತಿಸಿದರು. ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು.