ಸುಳ್ಯ ವಿಧಾನ ಸಭಾ ಕ್ಷೇತ್ರದ ಕೆ.ಪಿ.ಸಿ.ಸಿ. ಉಸ್ತುವಾರಿಯಾಗಿ ಚಂದ್ರಕಲಾ ಪ್ರಸನ್ನ

0

ಸುಳ್ಯ ವಿಧಾನ ಸಭಾ ಕ್ಷೇತ್ರದ ಕೆ.ಪಿ.,ಸಿ.ಸಿ ಉಸ್ತುವಾರಿಯಾಗಿ ಚಂದ್ರಕಲಾ ಪ್ರಸನ್ನರವರನ್ನು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೇಮಕಗೊಳಿಸಿರುತ್ತಾರೆ. ಕ್ಷೆತ್ರದ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡು ವಿಧಾನ ಸಭೆ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಸಂಬಂಧಿಸಿದಂತೆ ಪಕ್ಷ ಬಲವರ್ಧನೆಗೆ ಕಾರ್ಯಚಟುವಟಿಕೆಗಳನ್ನು ಡಿ.ಸಿ.ಸಿ/ಬಿ.ಸಿ.ಸಿ ಹಾಗೂ ಸ್ಥಳೀಯ ಮುಖಂಡರುಗಳ ಸಹಕಾರದೊಂದಿಗೆ ನಿರ್ವಹಿಸಲು ಕೋರಿದ್ದಾರೆ.

ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ಕೊಳಚೆ ನಿರ್ಮೂಲನ ಮತ್ತು ಒಳಚರಂಡಿ ಮಂಡಳಿಯ ಮಾಜಿ ಅಧ್ಯಕ್ಷೆಯಾಗಿರುವ ಚಂದ್ರಕಲಾ ಪ್ರಸನ್ನರವರನ್ನು ಪ್ರಸ್ತುತ ಸುಳ್ಯ ವಿಧಾನಸಭಾ ಕ್ಷೇತ್ರದ ಕೆ.ಪಿ.ಸಿ.ಸಿ. ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.