ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಜಪಾನೀಸ್ ಭಾಷಾ ಕಾರ್ಯಗಾರ

0

ಜಪಾನ್ ಭಾಷೆ ಕಲಿಕೆಯಿಂದ ಅವಕಾಶಗಳ ಹೆಚ್ಚಳ -ಚರಿತಾ ಮಧುಕರ್

ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಜಪಾನೀಸ್ ಭಾಷಾ ಕಾರ್ಯಗಾರವನ್ನು ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜೆಯವರ ಮಾರ್ಗದರ್ಶನದಲ್ಲಿ ಆ. 30ರಂದು ಆಯೋಜಿಸಲಾಗಿತ್ತು.
ಜಪಾನಿಸ್ ಭಾಷಾ ಸಲಹೆಗರಾರು ಮತ್ತು ತರಬೇತುದಾರರು, ಐಐಟಿ ಜಬಲ್ ಪುರ್, ಚರಿತಾ ಮಧುಕರ್
ಜಪಾನ್ ದೇಶದ ಟೆಕ್ನಾಲಜಿ, ಜಪಾನ್ ನಲ್ಲಿ ಇರುವ ಅವಕಾಶ ಹಾಗೂ ಜಪಾನ್ ಭಾಷೆಯ ಬೇಸಿಕ್ ನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮಕ್ಕೆ
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ, ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್, ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ‌.ಆರ್, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ವಿ, ಡೀನ್ ಅಕಾಡೆಮಿಕ್ಸ್ ಡಾ. ಪ್ರಜ್ಞಾ ಎಂ‌.ಆರ್, ಕೆವಿಜಿ ಐಪಿಎಸ್ ನ ಪ್ರಾಂಶುಪಾಲರಾದ ಅರುಣ್ ಕುಮಾರ್, ಕೆವಿಜಿ ಐಪಿಎಸ್ ನ ಅಕಾಡೆಮಿಕ್ ಸಂಯೋಜಕಿ ಶ್ರೀಮತಿ ರೇಣುಕಾ ಉತ್ತಪ್ಪ, ಕೆವಿಜಿ ಐಪಿಎಸ್ ನ ಉಪ ಪ್ರಾಂಶುಪಾಲರಾದ ಶ್ರೀಮತಿ ಶಿಲ್ಪ ಬಿದ್ದಪ್ಪ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.