ಸೆ.7: ಜಾಲ್ಸೂರಿನಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.7ರಂದು ನಡೆಯಲಿದೆ.

ಬೆಳಿಗ್ಗೆ ಪುರೋಹಿತ ನಯನಕೃಷ್ಣ ಭಟ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, 12 ತೆಂಗಿನಕಾಯಿ ಗಣಪತಿ ಹವನ, ಗಣೇಶ ಪ್ರತಿಷ್ಠೆ ನಡೆಯಲಿದೆ.
ಬಳಿಕ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ ಅರಿಯಡ್ಕ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಿಗ್ಗೆ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ನಾಗದೇವರಿಗೆ ನಾಗತಂಬಿಲ ನಡೆಯಲಿದೆ.

ಗಣೇಶೋತ್ಸವದ ಪ್ರಯುಕ್ತ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳಾದ ಹೂ ಕಟ್ಟುವ ಸ್ಪರ್ಧೆ, ಹಣತೆ ಉರಿಸುವ ಸ್ಪರ್ಧೆ ನೆರವೇರಲಿದೆ
ಬಳಿಕ ಸ್ಥಳೀಯ ಭಜಕ ವೃಂದದವರಿಂದ ಭಜನಾ ಸಂಕೀರ್ತನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.
ಅಪರಾಹ್ನ ಶ್ರೀ ಗಣಪತಿಯ ವಿಜೃಂಭಣೆಯ ಶೋಭಾಯಾತ್ರೆಯು ಜಾಲ್ಸೂರಿನಿಂದ ಹೊರಟು ಅಡ್ಕಾರು, ವಿನೋಬನಗರ, ಕೋನಡ್ಕಪದವು ಸಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಪಯಸ್ವಿನಿ ನದಿ ಕಿನಾರೆಯಲ್ಲಿ ಜಲಸ್ಥಂಭನ ನಡೆಯಲಿದೆ.