ಸೆ.7- ಸೆ.9 : ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2024 ಇದರ ವತಿಯಿಂದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7 ರಿಂದ ಸೆ.9 ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಸೆ.7.ರಂದು ಪೂ.ಗಂ.9 ರಿಂದ ಪ್ರತಿಷ್ಠೆ, ಗಣಪತಿ ಹೋಮ ಶ್ರೀ ಶಾರದಾಂಬಾ ಭಜನೆ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.ರಾತ್ರಿ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಪೂ. ಗಂ.9.30ಕ್ಕೆ ಕ್ರೀಡಾ ಸ್ಪರ್ಧೆಯನ್ನು ಸುಬ್ರಹ್ಮಣ್ಯ ಆರಕ್ಷಕ ಠಾಣೆ ಠಾಣಾಧಿಕಾರಿ ಕಾರ್ತಿಕ್ ಕೆ ಉದ್ಘಾಟಿಸಲಿದ್ದಾರೆ.ಸಾಂಸ್ಕೃತಿಕ ಸ್ಪರ್ಧೆಯನ್ನು ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ ಉದ್ಘಾಟಿಸಲಿದ್ದಾರೆ.
ಸಾಂಸ್ಕೃತಿಕ ಸ್ಪರ್ಧೆಗಳು ಎಲ್ ಕೆ ಜಿ, ಯು ಕೆ ಜಿ, ಕಿರಿಯ, ಹಿರಿಯ, ಮಹಿಳಾ , ಸಾರ್ವಜನಿಕ ವಿಭಾಗಗಳಲ್ಲಿ ಜರುಗಲಿದೆ. ಪೂ.ಗಂ.9.30ರಿಂದ ರಂಗೋಲಿ, ರಸಪ್ರಶ್ನೆ, ಭಾಷಣ, ಅ.ಗಂ.3ರಿಂದ ಭಕ್ತಿ ಗೀತೆ ಮತ್ತು ಛದ್ಮವೇಷ ಜರುಗಲಿದೆ.

ಕ್ರೀಡಾ ಸ್ಪರ್ಧೆಗಳು ಪೂ.ಗಂ.10 ರಿಂದ ಅಂಗನವಾಡಿ ಮತ್ತು ಎಲ್ ಕೆ ಜಿ, ಯು ಕೆ ಜಿ ಮಕ್ಕಳಿಗೆ ಕಪ್ಪೆ ಜಿಗಿತ, ಕಾಳು ಹೆಕ್ಕುವುದು. ಮಹಿಳೆಯರಿಗೆ ಬಾಟಲಿಗೆ ನೀರು ತುಂಬಿಸುವುದು, ಸ್ಕಿಪ್ಪಿಂಗ್ (ಹಗ್ಗ ಜಿಗಿತ), ಹುಡುಗಿಗೆ ಜಡೆ ಬರೆಯುವುದು, ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ, ಪುರುಷರಿಗೆ ನಿಧಾನ ದ್ವಿ-ಚಕ್ರ ವಾಹನ ಚಾಲನೆ, ನಿಧಾನ ಸೈಕಲ್ ಚಾಲನೆ,
ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ಜರುಗಲಿದೆ. ಪ್ರಥಮ ರೂ. 2000, ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ. ಹಗ್ಗ ಜಗ್ಗಾಟ ಸ್ಪರ್ಧೆ ಪುರುಷರ ವಿಭಾಗದ ಸ್ಪರ್ಧೆ (7 ಸದಸ್ಯರ ತಂಡ) ಪ್ರಥಮ ರೂ.2000,ದ್ವಿತೀಯ ರೂ.1000 ನಗದು ಬಹುಮಾನ. ಮಹಿಳಾ ವಿಭಾಗದಲ್ಲಿ (7 ಸದಸ್ಯರ ತಂಡ) ಪ್ರಥಮ ರೂ‌.1500, ದ್ವಿತೀಯ ರೂ.1000 ನಗದು ಬಹುಮಾನ.

ಅ. ಗಂ.2.30 ರಿಂದ ಸೂರ್ಯ – ಹೊನಲು ಬೆಳಕಿನ ಪುರುಷರ 65 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ಪ್ರಥಮ ರೂ.5555, ದ್ವಿತೀಯ ರೂ 3333, ಸೆಮಿ ಫೈನಲ್ ನಲ್ಲಿ ನಿರ್ಗಮಿತ ಎರಡು ತಂಡಗಳಿಗೆ ತಲಾ ರೂ.1111 ನಗದು ಬಹುಮಾನ.

ಸೆ.8.ರಂದು ಪೂ. ಗಂ.10 ರಿಂದ ಚಿತ್ರಕಲಾ ಮತ್ತು ರಸ- ಸ್ಪರ್ಧೆ ,ಕೇರಂ ಮತ್ತು ಚೆನ್ನೆಮಣೆ -ಸ್ಪರ್ಧೆ ನಡೆಯಲಿದೆ.
ಚಿತ್ರಕಲಾ ಸ್ಪರ್ಧೆ ಎಲ್ ಕೆ ಜಿ ,ಯು ಕೆ ಜಿ ಐಚ್ಚಿಕ, 2ರಿಂದ 4 ನೇ ತರಗತಿ ಪರಿಸರ,
5 ರಿಂದ 7 ನೇ ತರಗತಿ ಗಣಪತಿ, 8 ರಿಂದ 10 ನೇ ತರಗತಿ ಸಾರ್ವಜನಿಕ ಗಣೇಶೋತ್ಸವ, ಸಾರ್ವಜನಿಕರಿಗೆ ಸ್ವಚ್ಛ ಪ್ರಕೃತಿ ವಿಷಯದಲ್ಲಿ ನಡೆಯಲಿದೆ.
ಕಸದಿಂದ ರಸ ಸ್ಪರ್ಧೆ ಪ್ರಾಥಮಿಕ, ಪ್ರೌಢಶಾಲಾ ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯಲಿದೆ.ಸ್ಪರ್ಧಿಗಳು ಪರಿಹಾರಗಳನ್ನು ತಂದು ಸ್ಥಳದಲ್ಲಿ ಮಾದರಿ ತಯಾರಿ.
ಮುಕ್ತ ಡಬಲ್ಸ್ ಕೇರಂ ಸ್ಪರ್ಧೆ ಸಾರ್ವಜನಿಕ ಮತ್ತು ಮುಕ್ತ ಚೆನ್ನೆಮಣೆ ಸ್ಪರ್ಧೆ ಸಾರ್ವಜನಿಕ ನಡೆಯಲಿದೆ.
ಉತ್ಸವ ಕಾರ್ಯಕ್ರಮ ಬೆಳಗ್ಗಿನ ಪೂಜೆ ಪ್ರಸಾದ ವಿತರಣೆ, ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಸಂಜೆ ವನಿತಾ ಸಮಾಜ ರವರಿಂದ ಭಜನಾ ಸಂಕೀರ್ತನೆ.ರಾತ್ರಿ ಮಹಾ ಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂ7.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಾಜಿ ಸಂಸದ ನಳಿನ ಕುಮಾರ್ ಕಟೀಲ್ ಪಾಲ್ಗೊಳ್ಳಲಿದ್ದಾರೆ. ಫಾರೆಸ್ಟ್ ಕ್ರೀಯೇಟರ್ಸ್ ,ಗ್ರೀನ್ ಹೀರೋ ಆಪ್ ಇಂಡಿಯಾ ಸಂಸ್ಥಾಪಕ ಡಾ.ಆರ್. ಕೆ ನಾಯರ್ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕ ಆರಾಧನಾ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ಉಪಸ್ಥಿತರಿರುವರು.‌
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂ.ಗಂ.6 ರಿಂದ 7ತನಕ ಬೆಳ್ಳಾರೆ ಕಲಾಮಂದಿರ್ ಡ್ಯಾನ್ಸ್ ಕ್ರೂ ಪ್ರಸ್ತುತಿಯ ನೃತ್ಯ ವೈವಿಧ್ಯ, ರಾತ್ರಿ .ಗಂ 8 ರಿಂದ ಕೊಡವೂರು ನೃತ್ಯ ನಿಕೇತನ ಪ್ರಸ್ತುತಿಯ ನಾರಸಿಂಹ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.

ಸೆ.9 ರಂದು ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ , ಶ್ರೀ ವಿಷ್ಣು ಭಜನಾ ಮಂಡಳಿ ಅಳ್ಪೆ ಚಿಂಗಾಣಿಗುಡ್ಡೆ ಯವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಸಂ.ಗಂ. 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ಸೇತುವೆ ಬಳಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ
ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ ,ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.