ಸಂಧ್ಯಾರಶ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ

0

5.42 ಕೋಟಿ ವ್ಯವಹಾರ, ರೂ. 4.45 ಲಕ್ಷ ಲಾಭ ಶೇ. 8 ಡಿವಿಡೆಂಟ್

ಸುಳ್ಯದ ಕುರುಂಜಿಭಾಗ್ ನಲ್ಲಿರುವ
ಸಂಧ್ಯಾರಶ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಆ. 31ರಂದು ಸೊಸೈಟಿಯ ಸಭಾಂಗಣದಲ್ಲಿ ಸೊಸೈಟಿಯ ಅಧ್ಯಕ್ಷ ಡಾ. ಎಸ್. ರಂಗಯ್ಯರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಂಘವು ವರದಿ ಸಾಲಿನಲ್ಲಿ 23 ಲಕ್ಷ ಪಾಲುಬಂಡವಾಳವನ್ನು ಹೊಂದಿದ್ದು, ವಾರ್ಷಿಕ 5.42ಕೋಟಿ ವ್ಯವಹಾರ ನಡೆಸಿ ರೂ. 4.45ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ 8% ಡಿವಿಡೆಂಟ್ ನೀಡಲಿದೆ. ನಮ್ಮ ಸೊಸೈಟಿಯಿಂದ ರೂ. 30ಸಾವಿರದೊಳಗೆ ಸಾಲ ಪಡೆದ ಬಡವರಿಗೆ ಕನಿಷ್ಠ ಬಡ್ಡಿದರ ವಿಧಿಸಿದ್ದೇವೆ ಎಂದು ಸೊಸೈಟಿ ಅಧ್ಯಕ್ಷ ಡಾ. ರಂಗಯ್ಯ ಸಭೆಗೆ ತಿಳಿಸಿದರು.


ಸೊಸೈಟಿ ನಿರ್ದೇಶಕಿ ಡಾ. ಸಾಯಿಗೀತ ಜ್ಞಾನೇಶ್ ರವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು.


ಸೊಸೈಟಿ ನಿರ್ದೇಶಕ ನಾಗಪ್ಪ ಗೌಡ ಬೊಮ್ಮೆಟ್ಟಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸೊಸೈಟಿಯ ಸದಸ್ಯರಾಗಿದ್ದು, ವರದಿ ಸಾಲಿನಲ್ಲಿ ನಿಧನರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಿರ್ದೇಶಕ ಸಿ.ಎ. ಕೇಶವ ಮೃತಪಟ್ಟ ಸದಸ್ಯರ ಹೆಸರನ್ನು ವಾಚಿಸಿದರು. ನಗರ ಪಂಚಾಯತ್ ನ ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸೊಸೈಟಿ ಸದಸ್ಯ ಬುದ್ಧ ನಾಯ್ಕ ಮತ್ತು ಹಿರಿಯ ನಿರ್ದೇಶಕ ಅಡ್ಡಂತಡ್ಕ ದೇರಣ್ಣ ಗೌಡರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ನಿರ್ದೇಶಕ ಸುಬ್ರಹ್ಮಣ್ಯ ಹೊಳ್ಳ ಮಹಾಸಭೆಯ ನೋಟೀಸು ಓದಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಎಂ.ಆರ್ 2023ನೇ ಸಾಲಿನ ಮಹಾಸಭೆಯ ನಡಾವಳಿಯನ್ನು ವಾಚಿಸಿದರು. ಸಂಘದ ವಾರ್ಷಿಕ ವರದಿಯನ್ನು ಸೊಸೈಟಿಯ ವೃತ್ತಿಪರ ನಿರ್ದೇಶಕ ಬಾಲಸುಬ್ರಹ್ಮಣ್ಯ ಕೆ.ಎಸ್. ವಾಚಿಸಿದರು. ಸೊಸೈಟಿಯ ಉಪಾಧ್ಯಕ್ಷ ವಿಶ್ವನಾಥ ನಾಯರ್ ಖರ್ಚು, ವೆಚ್ಚ ಮತ್ತು ಸೊಸೈಟಿಯ ವಹಿವಾಟುಗಳನ್ನು ಸಭೆಗೆ ಮಂಡಿಸಿದರು. ಸೊಸೈಟಿಯ ನಿರ್ದೇಶಕ ಎ. ಸುಧಾಮ ಬಜೆಟ್ ಗಿಂತ ಹೆಚ್ಚು ಖರ್ಚಾದ ಮತ್ತು ಮುಂಗಡ ಬಜೆಟ್ ನ ವಿವರ ವಾಚಿಸಿದರು. ಸೊಸೈಟಿ ನಿರ್ದೇಶಕ ತುಕಾರಾಮ ಯೇನೆಕಲ್ಲು ವರದಿಯಲ್ಲಿ ಸೂಚಿಸಿದ ಸಂಘವು ನೀಡಿದ ನ್ಯೂನತೆಗೆ ಸಮಜಾಯಿಕೆ ವಾಚಿಸಿದರು.

ಸೊಸೈಟಿಯ ನಿರ್ದೇಶಕರಾದ ಶಂಕರ ಪಾಟಾಳಿ ಎಸ್, ವಾಸುದೇವ ಮೊಗ್ರ, ಕೆ.ಆರ್. ಚಂದ್ರಹಾಸ, ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿ, ಶ್ರೀಧರ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ಅಬ್ದುಲ್ಲಾ ಅರಂತೋಡು ಕಾರ್ಯಕ್ರಮ ನಿರೂಪಿಸಿ ಲಾಭಾಂಶ ಹಂಚಿಕೆಯನ್ನು ಸಭೆಗೆ ಮಂಡಿಸಿದರು. ಸೊಸೈಟಿ ನಿರ್ದೇಶಕ ಚೆನ್ನಕೇಶವ ಎಂ ವಂದಿಸಿದರು.