ಉಸಿರಾಟದ ತೊಂದರೆ : ಮಾಲ್‌ನಲ್ಲೇ ಕುಸಿದು ಬಿದ್ದ ಡಿ.ವಿ.ಸದಾನಂದರ ಪತ್ನಿ, ಚೇತರಿಕೆ

0

ಬೆಂಗಳೂರಿನಲ್ಲಿ ನಿನ್ನೆ ಶಾಪಿಂಗ್‌ಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಪತ್ನಿ ಶ್ರೀಮತಿ ಡಾಟಿ ಸದಾನಂದರು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಲ್‌ನಲ್ಲೇ ಕುಸಿದು ಬಿದ್ದ ಘಟನೆ ವರದಿಯಾಗಿದೆ. ಅವರನ್ನು ಕೂಡಲೇ ಕಾರು ಚಾಲಕ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಡಿ.ವಿ.ಸದಾನಂದ ಗೌಡರ ಪತ್ನಿ ಡಾಟಿಯವರು ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಇರುವ ಐಕಿಯಾ ಮಾಲ್‌ಗೆ ಶಾಪಿಂಗ್‌ಗೆ ಹೋಗಿದ್ದರು. ಆ ಸಂದರ್ಭ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ದಿಢೀರ್ ಅಸ್ವಸ್ಥಗೊಂಡ ಅವರು ಅಲ್ಲೇ ಕುಸಿದರು. ಕೂಡಲೇ ಅವರನ್ನು ಅವರ ಕಾರು ಚಾಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ವಿಷಯ ತಿಳಿದ ಡಿ.ವಿ.ಸದಾನಂದರು ಮತ್ತು ದಾಸರಹಳ್ಳಿ ಶಾಸಕ ಮುನಿರಾಜು ಮತ್ತಿತರರು ಆಸ್ಪತ್ರೆಗೆ ಧಾವಿಸಿದರು. ರಕ್ತದೊತ್ತಡ ಮತ್ತು ಶುಗರ್ ಅಂಶ ಏರುಪೇರು ಆದ ಹಿನ್ನಲೆಯಲ್ಲಿ ಘಟನೆ ನಡೆಯಿತೆನ್ನಲಾಗಿದೆ. ಚಿಕಿತ್ಸೆಯಿಂದ ಚೇತರಿಸಿಕೊಂಡು ಅವರು ನಿನ್ನೆಯೇ ಮನೆಗೆ ಮರಳಿದ್ದಾರೆ.