ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಂಗಣ, ಕೊಡಿಯಾಲ ಶಾಖಾ ಕಟ್ಟಡ ಲೋಕಾರ್ಪಣೆ

0

ಸಹಕಾರಿ ಕ್ಷೇತ್ರ ಪವಿತ್ರವಾದ ಕ್ಷೇತ್ರ : ಶಶಿಕುಮಾರ್ ರೈ ಬಾಲ್ಯೊಟ್ಟು

ಸಹಕಾರಿ ಸಂಘ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ – ಎಸ್.ಎನ್.ಮನ್ಮಥ

ಎಲ್ಲರ ಸಹಕಾರದಿಂದ ಸಂಸ್ಥೆ ಗಟ್ಟಿಮುಟ್ಟಾಗಿ ಎದ್ದು ನಿಂತಿದೆ – ಶ್ರೀರಾಮ ಪಾಟಾಜೆ

“ರೈತರಿಂದಲೇ ನಡೆಸುತ್ತಾ ಬಂದಿರುವ ಸಹಕಾರಿ ಸಂಘಗಳು ರೈತರ ಆಗುಹೋಗುಗಳಿಗೆ ಸ್ಪಂದಿಸುತ್ತಿದೆ.ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದೆ.ಗ್ರಾಮೀಣ ಪ್ರದೇಶದ ರೈತರಿಂದ ಡೆಪಾಸಿಟ್ ಪಡೆದು ಆರ್ಥಿಕ ಕ್ರೋಢೀಕರಣ ಮಾಡಿ ಜನರಿಗೆ ಸಾಲವನ್ನು ನೀಡುತ್ತಾ ಜನರೊಂದಿಗೆ ಸದಾ ಸ್ಪಂದಿಸುತ್ತಿದೆ.
ಸರಕಾರದ ಅನುದಾನಗಳು ನೇರವಾಗಿ ರೈತರ ಖಾತೆಗೆ ಜಮಾ ಆಗುವುದು ಅದು ಸಹಕಾರಿ ಕ್ಷೇತ್ರದ ಮೂಲಕ ಮಾತ್ರ.ಇದರಿಂದ ಸಹಕಾರಿ ಕ್ಷೇತ್ರ ಪವಿತ್ರವಾದ ಕ್ಷೇತ್ರ ಎಂದು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.


ಅವರು ಸೆ.01 ರಂದು ನಡೆದ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಡಿಯಾಲ ಶಾಖಾ ಕಟ್ಟಡ ಮತ್ತು ಕೊಡಿಯಾಲ ಶಾಖಾ ಸ್ಥಳ ಮಂಜೂರಾತಿ ಮಾಡಿಸಿದ ಹಿರಿಯ ಸಹಕಾರಿ ದಿ.ಪಿ.ಭಾಸ್ಕರ ರೈಯವರ ಭಾವಚಿತ್ರ ಅನಾವರಣಗೊಳಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಸಂಘದ ನೂತನ ಸಭಾಂಗಣವನ್ನು ದ.ಕ.ಜಿಲ್ಲಾ .ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಎನ್.ಮನ್ಮಥರವರು ಉದ್ಘಾಟಿಸಿದರು.
ಗ್ರಾಹಕ ಸೇವಾ ಕೇಂದ್ರವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ .ರೈ ಉದ್ಘಾಟಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ವಿಜಯ ರೈ ವರದಿ ಮಂಡಿಸಿದರು.

ನಿವೃತ್ತ ಲೆಕ್ಕಿಗ ರವೀಂದ್ರ ರೈಯವರಿಗೆ ಸನ್ಮಾನ

ಸಹಕಾರಿ ಸಂಘದಲ್ಲಿ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಆ.31 ರಂದು ಲೆಕ್ಕಿಗ ಹುದ್ದೆಯಿಂದ ನಿವೃತ್ತಿ ಹೊಂದಿದ ಯಂ.ರವೀಂದ್ರ ರೈ ದಂಪತಿಗಳನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು,ಎಸ್.ಎನ್.ಮನ್ಮಥರವರನ್ನು ಶಾಲುಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಅಭಿನಂದನಾ ಕಾರ್ಯಕ್ರಮ
ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ಎ.ಸುಬ್ರಹ್ಮಣ್ಯ ಭಟ್ ನೆಲ್ಯಾರ ಮನೆ,ಶ್ರೀಮತಿ ವಸಂತಿ ವಿ‌.ಉಪ್ಪಂಗಳ ಮನೆ, ಚನಿಯ ಬಜ ಮನೆ, ಸುಲೈಮಾನ್ ತೋಟದಮೂಲೆ ಹಿರಿಯ ಸಹಕಾರಿಗಳಾದ ಪಿ.ಮಂಜುನಾಥ ಆಳ್ವ ಪುಡ್ಕಜೆ, ಎಲ್ಯಣ್ಣ ಪೂಜಾರಿ ದಾಸನಮಜಲು, ಶಂಕರನಾರಾಯಣ ಭಟ್ ಕುರುಂಬುಡೇಲು ಉತ್ತಮ ಕೃಷಿಕ ದಯಾನಂದ ಗೌಡ ಜೆ.ಕಾನಾವುಜಾಲು ಪೆರುವಾಜೆ, ಕುಂಞಣ್ಣ ಶೆಟ್ಟಿ ಕೊಡಿಯಾಲ ಶ್ರೀಮತಿ ಪ್ರೇಮಲತಾ ಬಿ.ರೈ ಪುಡ್ಕಜೆ,ಕರುಣಾಕರ ಆಳ್ವ ಬೇರ್ಯ,ಪಿ.ಗಂಗಾಧರ ರೈ ಪುಡ್ಕಜೆ,ಅನಿಲ್ ಕುಮಾರ್ ರೈ ಚಾವಡಿಬಾಗಿಲು ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಸುಬ್ರಹ್ಮಣ್ಯ ಕಲ್ಚಾರ್,ಈಶ್ವರ ಆಳ್ವ ಬೇರ್ಯ,ನಿವೃತ್ತ ಲೇಖಪಾಲರಾದ ಸುಬ್ಬಣ್ಣ ರೈ ತಂಬಿನಮಕ್ಕಿ, ದಿವಾಕರ ರೈ ಮರಿಕೇಯಿ ನಿವೃತ್ತ ಗುಮಾಸ್ತ ಕೆ.ಜತ್ತಪ್ಪ ಪಡ್ಪು
ಇವರನ್ನು ಶಾಲು ಹೊದಿಸಿ ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬಿಲ್ಡಿಂಗ್ ಕಾಂಟ್ರಾಕ್ಟರ್ ಶಬೀರ್ ಬಾಳಿಲ,ಜೀವನ್ ರೈ ಸುಳ್ಯ ಇವರನ್ನು ಸನ್ಮಾನಿಸಲಾಯಿತು.


ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ.ವಿಜಯ ರೈ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,ನಿರ್ದೇಶಕರಾದ ಬಿ.ಕರುಣಾಕರ ಆಳ್ವ, ಅನಿಲ್ ಕುಮಾರ್ ರೈ.ಸಿ, ಯಂ.ರಮೇಶ ಮಾರ್ಲ,ವಿಠಲದಾನ್ ಎನ್.ಎಸ್.ಡಿ, ಶ್ರೀಮತಿ ನಿರ್ಮಲ ರೈ,ಶ್ರೀಮತಿ ಶಾರದಾ ರೈ,ಶ್ರೀಮತಿ ಸಾವಿತ್ರಿ,ಲಕ್ಷ್ಮಣ ಬಿ.ಜಿ, ಹರೀಶ ಬಿ, ಸುಂದರ ಕೆ.ಜೆ,ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪುತ್ಯ ಉಪಸ್ಥಿತರಿದ್ದರು.


ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಸ್ವಾಗತಿಸಿ,ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿಗಳು ಪ್ರಾರ್ಥಿಸಿ,ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿ,ನಿರ್ದೇಶಕ ಅನಿಲ್ ರೈ ಚಾವಡಿಬಾಗಿಲು ವಂದಿಸಿದರು.