ಕೆವಿಜಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಸಮುದಾಯ ಆರೋಗ್ಯ ವಿಚಾರಣಾ ಅಭಿಯಾನವು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ
ಆ.30 ರಂದು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆಯ ಕುರಿತು ಮತ್ತು ಡೆಂಗ್ಯೂ ಸೋಂಕಿನ ತಡೆಗಟ್ಟುವಿಕೆ ಕ್ಷಯರೋಗದ ಲಕ್ಷಣಗಳು ಮತ್ತು ಅದನ್ನು ತಡೆಗಟ್ಟುವಿಕೆಯ ಬಗ್ಗೆ ನಾಟಕದ ಮೂಲಕ ಮಕ್ಕಳಿಗೆ ಅರಿವು ನೀಡಲಾಯಿತು.
ಮೈಮ್ ಶೋ ಮೂಲಕ ಪರಿಸರದ ನೈರ್ಮಲ್ಯವನ್ನು ಕಾಪಾಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಡಲಾಯಿತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಕಿರಣ್ ಪಿ,ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ಮಾಯಿಲಪ್ಪ, ಕೆವಿಜಿ ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ದಯಾನಂದ, ಬೆಳ್ಳಾರೆ ಶುಶ್ರೂಷಕಿ ಬೇಬಿ, ಕೆವಿಜಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಶಿಲ್ಪ, ಲವೀನ ಕುಡೆಕಲ್ಲು, ನಿರಂಜನಿ, ಸಹ ಶಿಕ್ಷಕರಾದ ದಿನೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 800 ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಪೆನ್ಸಿಲನ್ನು ವಿತರಣೆ ಮಾಡಲಾಯಿತು.