⬆️ ನಿವೃತ್ತ ದೈ. ಶಿ. ಶಿಕ್ಷಕ ಯೋಗೀಶ್ ಚಿದ್ಗಲ್ಲು ರವರಿಗೆ ಸನ್ಮಾನ
⬆️ ಸಂಘಟನೆಗಳಿಂದ ಗ್ರಾಮಾಭಿವೃದ್ಧಿ-ಎಸ್ ಅಂಗಾರ
ಶಿವಾಜಿ ಯುವಕ ಮಂಡಲ ಕೂತ್ಕುಂಜ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ, ಶಾಶ್ವತ ರಂಗ ಮಂದಿರ ಉದ್ಘಾಟನೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ರವರಿಗೆ ಸನ್ಮಾನ ಕಾರ್ಯಕ್ರಮವು ಕೂತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ಸೆ.1.ರಂದು ನಡೆಯಿತು.
ಮಾಜಿ ಸಚಿವ ಎಸ್ ಅಂಗಾರ ರಂಗಮಂದಿರ ಉದ್ಘಾಟಿಸಿದರು .
ಬಳಿಕ ಅವರು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ , ಶಿವಾಜಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗೀಶ್ ಚಿದ್ಗಲ್ ರವರನ್ನು ಸನ್ಮಾನಿಸಿದರು. ಈ ವೇಳೆ ಯೋಗೀಶ್ ಚಿದ್ಗಲ್ಲು ರವರ ಪತ್ನಿ ಶಿಕ್ಷಕಿ ಶ್ರೀಮತಿ ಕಮಲಾ ಜೊತೆಗಿದ್ದರು.
ಬಳಿಕ ಎಸ್ ಅಂಗಾರ ರವರು ಮಾತನಾಡಿ.
“ಯುವ ಜನರು ನಮ್ಮ ಮುಖ್ಯ ಉದ್ದೇಶ ಗುರಿ ತಲುಪ ಬೇಕು.ಗ್ರಾಮಗಳು ಕ್ರೀಯಾ ಶೀಲವಾಗಿರಲು ಅಲ್ಲಿನ ಸಂಘಟನೆಗಳು ಕಾರಣವಾಗುತ್ತದೆ. ಅದಕ್ಕೆ ಪೂರಕವಾಗಿ ಇಲ್ಲಿ ಕ್ರೀಯಾ ಶೀಲ ಕೂತ್ಕುಂಜ ಶಿವಾಜಿ ಯುವಕ ಮಂಡಲ ಸೇವೆ ಸಲ್ಲಿಸುತ್ತಿದೆ”. ಎಂದು ಹೇಳಿದರು.
“ಯೋಗೀಶ್ ಚಿದ್ಗಲ್ಲು ರವರು ತನ್ನ ಸೇವೆ ಅವಧಿಯಲ್ಲಿ ಕಾಲೇಜಿನ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಶಾಲೆಯ ಅಭಿವೃದ್ಧಿ
ವಿಶೇಷ ಸೇವೆ ಸಲ್ಲಿಸಿದ್ದಾರೆ. ಅನೇಕ ಕ್ರೀಡಾ ಪಟುಗಳು ನಿರ್ಮಿಸುವಲ್ಲಿ ಸೇವೆ ಸಲ್ಲಿಸಿದ್ದಾರೆ.”ಎಂದು ಹೇಳಿದರು.
ಯುವಕ ಮಂಡಲದ ಅಧ್ಯಕ್ಷ ದೇವಿಪ್ರಸಾದ್ ಕುಳ್ಳಾಜೆ ಸಭಾಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈ,ಯುವ ಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು,ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ನೇತ್ರಾವತಿ ಕಲ್ಲಾಜೆ ಹಾಗೂ ಕಾರ್ಯಕ್ರಮ ನಿರ್ದೇಶಕ ಆದರ್ಶ ಚಿದ್ಗಲ್ಲು, ಯುವಕ ಮಂಡಲದ ನಿಕಟಪೂರ್ವಾಧ್ಯಕ್ಷ ಉಜ್ವಲ್ ಚಿದ್ಗಲ್ಲು, ಕಾರ್ಯದರ್ಶಿ ಪ್ರಜ್ವಲ್ ಚಿದ್ಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ರಂಗ ಮಂದಿರದ ಚಾವಣಿ ಕೆಲಸದಲ್ಲಿ ಸೇವೆ ಸಲ್ಲಿಸಿದ ನಿಧೀಶ್ ಕಕ್ಯಾನ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಚನಾ ಚಿದ್ಗಲ್ಲು ಪ್ರಾರ್ಥಿಸಿದರು. ಆದರ್ಶ ಚಿದ್ಗಲ್ಲು ಸ್ವಾಗತಿಸಿದರು. ಜೀವನ್ ಶೆಟ್ಟಿಗದ್ದೆ ನಿರೂಪಿಸಿದರು. ಚಂದ್ರಶೇಖರ ಇಟ್ಯಡ್ಕ ಪ್ರಾಸ್ತಾವಿಕ ಮಾತನಾಡಿದರು. ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಯುವಕ ಮಂಡಲದ ಸದಸ್ಯ ಬಿಪಿನ್ ಚಿದ್ಗಲ್ಲು ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಜ್ವಲ್ ಚಿದ್ಗಲ್ಲು ವಂದಿಸಿದರು. ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.