ಲೇಖನ್ ನೆಕ್ಕಿಲ ಎ.ಇ.ಎಂ.ಎ ಮೆರೈನ್ ಇಂಜಿನಿಯರ್ ತರಬೇತಿಗೆ ಆಯ್ಕೆ

0

ಪಂಜದ ಕಂರ್ಬು ನೆಕ್ಕಿಲ ಲೇಖನ್ ಕೆ.ಎನ್ ರವರು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಆಂಗ್ಲೋ ಈಸ್ಟರ್ನ್ ಮೆರೈನ್ ಅಕಾಡೆಮಿ (AEMA)ಯವರು ನಡೆಸಿದ ಕ್ಯಾಂಪಸ್ ಇಂಟರ್ ವ್ಯೂನಲ್ಲಿ ಮೆರೈನ್ ಇಂಜಿನಿಯರಿಂಗ್ ವೃತ್ತಿಪೂರ್ವ ತರಬೇತಿಗೆ ಆಯ್ಕೆಯಾಗಿರುತ್ತಾರೆ.
ಇವರು ಮಂಗಳೂರು ಸಹ್ಯಾದ್ರಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿ.ಇ ಪದವಿಯನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಕ್ಯಾಂಪಸ್ ನಿಂದ ಆಯ್ಕೆಯಾದ ಮೂವರು ವಿದ್ಯಾರ್ಥಿಗಳಲ್ಲಿ ಓರ್ವರಾಗಿದ್ದಾರೆ.
ಇವರು ಬೆಳ್ಳಾರೆ ಕೆಪಿಎಸ್ ನ ಪ್ರಾಂಶುಪಾಲ ಐವತ್ತೊಕ್ಲು ಗ್ರಾಮದ ಕಂರ್ಬು
ನೆಕ್ಕಿಲ ಜನಾರ್ದನ ಕೆ.ಎನ್.ಮತ್ತು ಪಂಜ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ನಿರ್ಮಲಾಕ್ಷಿ ದಂಪತಿ ಪುತ್ರ.