ಸುಳ್ಯ ನ ಪಂ ಅಧ್ಯಕ್ಷ – ಉಪಾಧ್ಯಕ್ಷರಿಂದ ಕಚೇರಿ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರೊಂದಿಗೆ ಸಭೆ

0

ಕಚೇರಿಗೆ ಬರುವ ಸಾರ್ವಜನಿಕರಿಗೆ ಸಿಬ್ಬಂದಿಗಳು ಉತ್ತಮ ಸೇವೆ ನೀಡಿ – ದೂರ ಬರಬಾರದು

ಪೌರ ಕಾರ್ಮಿಕರು ಕೆಲಸದ ವೇಳೆ ತಮ್ಮ ಅರೋಗ್ಯದ ಬಗ್ಗೆಯೂ ಜಾಗ್ರತೆ ವಹಿಸಿ

ಸುಳ್ಯ ನಗರ ಪಂಚಾಯತ್ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಬಳಿಕ ಕಚೇರಿ ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರೊಂದಿಗೆ ಪ್ರಥಮ ಸಭೆ ಸೆ 3 ರಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ‘ಕಚೇರಿಯ ಎಲ್ಲಾ ಸಿಬ್ಬಂದಿಗಳು ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕು.ನಮ್ಮಿಂದಾಗಿ ಜನರಿಗೆ ಯಾವುದೇ ತೊಂದರೆ ಉಂಟಾಗಬಾರದು. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕೆಲಸ ಕಾರ್ಯ ನಮ್ಮಿಂದ ಮತ್ತು ನಿಮ್ಮಿಂದ ಹಾಗುವ ರೀತಿಯಲ್ಲಿ ಇರಬೇಕು. ಅವರು ತರುವ ದಾಖಲೆಗಳು ಸರಿ ಇಲ್ಲದಿದ್ದರೆ ಅದರ ಬಗ್ಗೆ ಅವರಿಗೆ ಮಾಹಿತಿ ನೀಡಿ, ಇಲ್ಲದಿದ್ದಲ್ಲಿ ನಮ್ಮ ಗಮನಕ್ಕೆ ನೀಡಿ. ಪರಿಹರಿಸಲು ಸಾಧ್ಯವಾಗುವ ಕೆಲಸವಾಗಿದ್ದರೆ ಅದನ್ನು ಮಾಡಿ ಕೊಡುವ ಪ್ರಯತ್ನ ಮಾಡೋಣ. ಅದಕ್ಕೆ ತಮ್ಮ ಸಹಕಾರ ಅಗತ್ಯ.ಅಧಿಕಾರಿಗಳು, ಸಿಬ್ಬಂದಿಗಳು,ನಾವು ಜನಪ್ರತಿನಿದಿನಗಳು ನಮ್ಮ ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡೋಣ. ತೊಂದರೆಯಾಗಿದೆ ಎಂದು ಯಾವುದೇ ದೂರು ಬರಬಾರದು ಎಂದು ಹೇಳಿದರು.

ಪೌರಕಾರ್ಮಿಕ ರೊಂದಿಗೆ ಮಾತನಾಡಿದ ಅಧ್ಯಕ್ಷರು ‘ನೀವುಗಳು ಕೆಲಸ ನಿರ್ವಹಿಸುವ ಸಂಧರ್ಭ ತಮ್ಮ ತಮ್ಮ ಅರೋಗ್ಯದ ಬಗ್ಗೆ ಗಮನ ನೀಡಬೇಕು. ಮಾಸ್ಕ್, ಕೈ ಚೀಲ,ಕೆಲಸಕ್ಕೆ ಬಳಸುವ ಬೂಟುಗಳು ಕಡ್ಡಾಯವಾಗಿ ಧರಿಸಬೇಕು. ಅರೋಗ್ಯ ಇಲಾಖೆಗೆ ತೆರಳಿ ತಮ್ಮ ತಮ್ಮ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಇದ್ದಲ್ಲಿ ಅಧಿಕಾರಿಗಳ ಮತ್ತು ನಮ್ಮ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ನ ಪಂ ಉಪಾಧ್ಯಕ್ಷ ಬುದ್ಧ ನಾಯ್ಕ, ಮುಖ್ಯ ಅಧಿಕಾರಿ ಸುಧಾಕರ್ ಉಪಸ್ಥಿತರಿದ್ದರು.

ಸಭೆಯಲ್ಲಿ ಎಲ್ಲಾ ಸಿಬ್ಬಂದಿಗಳು, ಪೌರಕಾರ್ಮಿಕರು ಭಾಗವಹಿಸಿದ್ದರು.