ಸೆ. 07-08: ಯೇನೆಕಲ್ಲಿನ ಆದಿಶಕ್ತಿ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯೇನೆಕಲ್ಲು ಇದರ ಆಶ್ರಯದಲ್ಲಿ 17ನೇ ವರ್ಷದ ಶ್ರೀ ಗಣೇಶೋತ್ಸವ ಸೆ. 7-8ರಂದು ಯೇನೆಕಲ್ಲಿನ ಬಾಲಾಡಿ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ನಡೆಯಲಿದೆ. ಸೆ. 7ರಂದು ಬೆಳಿಗ್ಗೆ ಗಣಪತಿ ಹೋಮ, ಗಣೇಶನ ವಿಗ್ರಹ ಪ್ರತಿಷ್ಠಾಪನೆ, ಸಂಜೆ ಗಂಟೆ 6.00ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ. 8ರಂದು ಬೆಳಿಗ್ಗೆ 9.00ರಿಂದ ಸಾರ್ವಜನಿಕ ಬಾಲಕ, ಬಾಲಕಿಯರಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ 12.00ರಿಂದ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 2.00 ಗಂಟೆಯಿಂದ ಭಜನೆಯೊಂದಿಗೆ ಶೋಭಾಯಾತ್ರೆ ನಡೆದು ಗಣೇಶನ ವಿಸರ್ಜನೆ ನಡೆಯಲಿದೆ.