ಸೆ. 7: ಬಳ್ಳಕ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಬಳ್ಳಕ್ಕ ಇದರ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 7ರಂದು ಬಳ್ಳಕ್ಕದಲ್ಲಿ ನಡೆಯಲಿದೆ. ಬೆಳಿಗ್ಗೆ 9.00ಕ್ಕೆ ಗಣಪತಿ ಪ್ರತಿಷ್ಠೆ, ಬಳಿಕ ಊರವರಿಂದ ಭಜನಾ ಕಾರ್ಯಕ್ರಮ, ಪೂ. 10.00ರಿಂದ ರಂಗಪೂಜೆ, ಅಕ್ಷರಾಭ್ಯಾಸ, ಮಧ್ಯಾಹ್ನ 12.00ಕ್ಕೆ ಮಹಾಮಂಗಳಾರತಿ, ಬಳಿಕ ಪ್ರಸಾದ ವಿತರಣೆ, ಭೋಜನ ನಡೆಯಲಿದೆ. ಸಂಜೆ 3:30 ರಿಂದ ಶೋಭಾ ಯಾತ್ರೆ ಮತ್ತು ಗಣೇಶನ ವಿಸರ್ಜನೆ ನಡೆಯಲಿದೆ.