ರೆಂಜಾಳ ಕ್ಷೇತ್ರದಲ್ಲಿ ಚೌತಿ ಉತ್ಸವ

0

ಶ್ರೀ ದೇವರಿಗೆ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ, ಅಕ್ಷರಾಭ್ಯಾಸ, ಸಾಮೂಹಿಕ ಕಾರ್ತಿಕ ಪೂಜೆ

ಮರ್ಕಂಜ ಮತ್ತು ನೆಲ್ಲೂರುಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಕಾರಣಿಕ ಕ್ಷೇತ್ರ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಚೌತಿ ಉತ್ಸವವು ಸೆ.7 ರಂದು ನಡೆಯಿತು.


ಬೆಳಿಗ್ಗೆ ಉಷಾ ಪೂಜೆ ನಡೆದು ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ 12 ತೆಂಗಿನಕಾಯಿ ಗಣಪತಿ ಹವನ ನಡೆದು ಅಕ್ಷರಾಭ್ಯಾಸ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಪ್ರಸಾದ ಭೋಜನ ನಡೆಯಿತು. ಈ ಸಂದರ್ಭದಲ್ಲಿ ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.