ಚೆಂಬು : ಸ. ಹಿ.ಪ್ರಾ. ಶಾಲೆಯಲ್ಲಿ ಸಂಪಾಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

ಕೊಡಗು ಸಂಪಾಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ.ಹಿ.ಪ್ರಾ.ಶಾಲೆ ಊರುಬೈಲು ಚೆಂಬುವಿನಲ್ಲಿ ಸೆ. 9 ರಂದು ನಡೆಯಿತು.

ಕಾರ್ಯಕ್ರದ ದೀಪ ಪ್ರಜ್ವಲಿಸಿ ಉದ್ಘಾಟಿಸಿ, ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಮಹೇಶ ಎಂ ಪಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಚೆಂಬು ಅಧ್ಯಕ್ಷರು ತೀರ್ಥರಾಮ ಪೂಜಾರಿಗದ್ದೆ ಮಾತನಾಡಿ ” “ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಸುಂದರ ವೇದಿಕೆ ,ಅವರ ಉತ್ತಮ ಭವಿಷ್ಯವನ್ನು ರೂಪಿಸುವ ವೇದಿಕೆಯಾಗಲಿ” ಎಂದು ಶುಭ ಹಾರೈಸಿದರು.

ಗ್ರಾ.ಪಂ.ಚೆಂಬು ಸದಸ್ಯರು ರಮೇಶ ಹುಲ್ಲುಬೆಂಕಿ ಮಾತನಾಡಿ ” ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ವಿದ್ಯಾರ್ಥಿಗಳ ಪ್ರತಿಭೆಗಳನ್ನು ರಾಷ್ಟ್ರಮಟ್ಟಕ್ಕೆ ಗುರುತಿಸುವ ಕಾರ್ಯಕ್ರಮವಾಗಿದೆ” ಎಂದರು. ಗ್ರಾ.ಪಂ.ಚೆಂಬು ಸದಸ್ಯೆ ಕುಸುಮ ಉಪಸ್ಥಿತರಿದ್ದು, ಪ್ರತಿಭಾ ಕಾರಂಜಿ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಸ್ಪರ್ಧಾ ಮನೋಭಾವವನ್ನು ಮೂಡಿಸುವ ಉತ್ತಮ ಕಾರ್ಯಕ್ರಮವಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಡಿಕೇರಿ ತಾಲೂಕು ಅಧ್ಯಕ್ಷರು ಮೋಹನ ಪೆರಾಜೆ ಮಾತನಾಡಿ ” ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾಗಿರುವ ಈ ಪ್ರತಿಭಾ ಕಾರಂಜಿ ಸ್ಪರ್ಧಿಗಳ ಭಾಗವಹಿಸುವಿಕೆ ಮುಖ್ಯ, ಸೋಲು-ಗೆಲುವು ಸಾಮಾನ್ಯ, ಅವೆರಡನ್ನೂ ವಿಮರ್ಶೆ ಮಾಡಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುವಲ್ಲಿ ಪ್ರತಿಭಾ ಕಾರಂಜಿ ಯಶಸ್ವಿಯಾಗಲಿ ” ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಗ್ರಾ.ಪಂ.ಚೆಂಬು ಸದಸ್ಯರು ವಸಂತ ಎನ್ ಟಿ, ಸಿ.ಆರ್.ಪಿ ಚಂದ್ರಶೇಖರ, ಮುಖ್ಯಶಿಕ್ಷಕರು ಸೋಮಣ್ಣ ಕೆ.ಆರ್ , ಏಳು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ ಸಮಿತಿ, ಪೋಷಕರು, ತೀರ್ಪುಗಾರರಾಗಿ ಪೆರಾಜೆ ಕ್ಲಸ್ಟರಿನ ಶಿಕ್ಷಕರು ಭಾಗಿಯಾಗಿದ್ದರು. ಎಲ್ಲಾ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು/ಉಪಾಧ್ಯಕ್ಷರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆದು ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.


ಕಾರ್ಯಕ್ರಮವನ್ನು ಮುಖ್ಯಶಿಕ್ಷಕರು ಸ್ವಾಗತಿಸಿ, ವಿಕ್ರಾಂತ ಎಂ ಬಿ ನಿರೂಪಿಸಿದರು.