ಜೇಸೀಐ ಸುಳ್ಯ ಸಿಟಿ ವತಿಯಿಂದ ಗೊ ಗ್ರೀನ್ ಕಾರ್ಯಕ್ರಮ

0

ಜೇಸಿಐ ಸುಳ್ಯ ಸಿಟಿ ಘಟಕದ ವತಿಯಿಂದ ನಡೆಯುತಿರುವ ಜೇಸಿ ಸಪ್ತಾಹ ಡೈಮಂಡ್-2024 ಇದರ ಭಾಗವಾಗಿ ಮೂರನೇ ದಿನ ಬಳ್ಳಡ್ಕ ಪರಿಸರದಲ್ಲಿ “ಗೊ ಗ್ರೀನ್ ” ಶೀರ್ಷಿಕೆ ಅಡಿಯಲ್ಲಿ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ ಸುಳ್ಯ ಸಿಟಿ ಘಟಕದ ಸ್ಥಾಪಕರಾದ ಜೇಸಿ ಮನಮೋಹನ ಬಳ್ಳಡ್ಕ ಬಾಗವಹಿಸಿದರು. ಘಟಕದ ನಿಕಟ ಪೂರ್ವಾದ್ಯಕ್ಷ ಜೇಸಿ ರಂಜಿತ್ ಪಿ.ಜೆ, ಸಪ್ತಾಹ ನಿರ್ದೇಶಕಿ ಜೇಸಿ ಅನಿತಾ ಪಾನತಿಲ, ಸದಸ್ಯರಾದ ಜೇಸಿ ಶ್ವೇತಾ ಹಾಗೂ ಜೂನಿಯರ್ ಜೇಸಿ ಘಟಕದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು.