ಕೊಲ್ಲಮೊಗ್ರು-ಕಟ್ಟ-ಗೋವಿಂದನಗರ ಭಾಗಗಳಿಗೆ ಸಂಪರ್ಕಿಸುವ ಎಫ್.ಟಿ.ಟಿ.ಹೆಚ್ ಫೈಬರ್ ಕೇಬಲ್ ಕಳವಾದ ಘಟನೆ ಸೆ.10 ರಂದು ವರದಿಯಾಗಿದೆ.
ಕಟ್ಟ- ಗೋವಿಂದನಗರ ಪ.ಜಾತಿ ಕಾಲೋನಿ ಸಂಪರ್ಕ ರಸ್ತೆಯ ಬದಿಯಲ್ಲಿ
ಕೇಬಲ್ ನ್ನು ಕತ್ತಿಯಿಂದ ತುಂಡರಿಸಿ ಸುಮಾರು 30 ಮೀಟರ್ ಕೇಬಲ್ ಅನ್ನು ಹಾಡುಹಗಲೇ ಕಳವುಗೈದಿದ್ದಾರೆ.
ಸತತ ಎರಡನೇ ಬಾರಿಗೆ ಈ ರೀತಿಯ ದುಷ್ಕೃತ್ಯವನ್ನು ಎಸಗಲಾಗುತ್ತಿದ್ದು, ಇದರಿಂದಾಗಿ ಈ ಭಾಗದಲ್ಲಿ ಸುಮಾರು 30-35 ಮನೆಗಳಿಗೆ ಫೋನ್ ಹಾಗೂ ವೈಫೈ ಇಂಟರ್ನೆಟ್ ಸಂಪರ್ಕ ಇಲ್ಲದೇ ತೊಂದರೆ ಅನುಭವಿಸಿದರು.
ಕಳುವುಮಾಡಿದವರನ್ನು ಪತ್ತೆ ಹಚ್ಚುವ ಸಲುವಾಗಿ ದೈವ-ದೇವರುಗಳ ಮೊರೆ ಹೋಗುವುದಾಗಿ ತಿಳಿದು ಬಂದಿದೆ. ಈ ಹಿಂದೆಯೂ ಇದೇ ಭಾಗದಲ್ಲಿದ್ದ ಸೋಲಾರ್ ಲೈಟ್ ನ ಬ್ಯಾಟರಿ ಕಳುವಾಗಿತ್ತು.