ಸುಳ್ಯದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆಯನ್ನು ಸೆ. 13ರಂದು ಮಾಡಲಾಯಿತು. ವಿದ್ಯಾಸಂಸ್ಥೆಯ ಮಕ್ಕಳು ಪ್ರಾರ್ಥನೆಯನ್ನು ಮಾಡಿದರು. 9ನೇ ವಿಭಾಗದ ಶಿಝ ದಿನದ ಆಚರಣೆಯ ಮಹತ್ವವನ್ನು ತಿಳಿಸಿದರು.
ಇಸ್ಲಾಂ ಧರ್ಮದ ಮಕ್ಕಳು ಈದ್ ಮಿಲಾದ್ ಸಂಕೇತವಾಗಿರುವ ದಫ್ ನೃತ್ಯ, ಹುಡುಗರು ಕವಾಲಿ ಮತ್ತು ಪುಟಾಣಿ ಮಕ್ಕಳು ಈದ್ ಮಿಲಾದ ಹಾಡನ್ನು ಹಾಡುವ ಮೂಲಕ ಈದ್ ಮಿಲಾದ್ ಆಚರಣೆಗೆ ಮೆರುಗನ್ನು ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅಬ್ದುಲ್ ಸಮಾದ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ” ಎಲ್ಲಾ ಧರ್ಮವು ಶಾಂತಿ ಮತ್ತು ಮಾನವೀಯತೆಯನ್ನು ಕಲಿಸುತ್ತದೆ ಯಾರು ತಮ್ಮ ಧರ್ಮವನ್ನು ಗೌರವಿಸುತ್ತಾರೋ ಅವರು ಇತರ ಧರ್ಮವನ್ನು ಗೌರವಿಸುತ್ತಾರೆ ಎಂದು ಹೇಳುತ್ತಾ ಈದ್ ಮಿಲಾ ಸಂದೇಶವನ್ನು ನೀಡಿದರು .
ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಸಂಚಾಲಕರಾದ ರವರ ಫಾದರ್ ವಿಕ್ಟರ್ ಡಿಸೋಜಾ ರವರು ” ಎಲ್ಲಾ ಧರ್ಮಗಳು ಹೂ ಹೂತೋಟದಲ್ಲಿನ ಹೂವಿನಂತೆ ” ನಮ್ಮ ಧರ್ಮದ ಜೊತೆ ಇತರ ಧರ್ಮವನ್ನು ಗೌರವಿಸುವ ಎಂದು ಹೇಳಿದರು. ಮುಖ್ಯ ಶಿಕ್ಷಕಿ ಮೇರಿ ಸ್ಟೇಲ್ಲಾ ರವರು ಈದ್ ಮಿಲಾದ್ ಆಚರಣೆಗೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿರುವ ಪ್ರಮೋದ್ ಶೆಟ್ಟಿ ಹಾಗೂ ಶಶಿಧರ್ ಎಮ್ಎಚ್ ಮತ್ತು ಹೇಮನಾಥ್ ರವರು ಉಪಸ್ಥಿತರಿದ್ದರು. 8ನೇ ವಿಭಾಗದ ಹೈನಾ ತಸ್ಲೀಮ್ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿ ಎಂಟನೇ ವಿಭಾಗದ ಹೈಫಾ ವಂದಿಸಿದರು. ರಿಫಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.