ಕೆವಿಜಿ ಐಪಿಎಸ್ ನಲ್ಲಿ ಶಿಕ್ಷಕರಿಗಾಗಿ ಲೈಬ್ರರಿ ಆಟೊಮೇಷನ್ ಕಾರ್ಯಗಾರ

0

ಶಿಕ್ಷಕರ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸಲು ಗ್ರಂಥಾಲಯಗಳು ಅತೀ ಅವಶ್ಯಕ :ಡಾ. ಉಜ್ವಲ್ ಯು ಜೆ

ಗ್ರಂಥಾಲಯಗಳಲ್ಲಿ ಶಿಸ್ತು ಬದ್ಧತೆ ಅತೀ ಮುಖ್ಯ : ಶ್ರೀಮತಿ ಸಿಂಧು ವೆಂಕಟೇಶ್

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಅವರ ನಿರ್ದೇಶನದಂತೆ ಶಿಕ್ಷಕರ ಕಾರ್ಯಚರಣೆಗಳ ದಕ್ಷತೆಯನ್ನು ಹೆಚ್ಚಿಸಲು ಗ್ರಂಥಾಲಯಗಳು ಅತೀ ಅವಶ್ಯಕ ಎಂಬ ವಿಷಯದ ಬಗ್ಗೆ ಶಿಕ್ಷಕರಿಗಾಗಿ ಸೆ. 13 ರಂದು ಲೈಬ್ರರಿ ಆಟೊಮೇಷನ್ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭ ಹಾರೈಸಿದರು.


ಕಾರ್ಯಕ್ರಮಕ್ಕೆ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ಗ್ರಂಥಪಾಲಕ ಸೀತಾರಾಮರವರು ಆಗಮಿಸಿ ‘ ಗ್ರಂಥಾಲಯದ ಅವಶ್ಯಕತೆ ನಮಗೆ ಯಾಕೆ ಬೇಕು’ ಎಂಬುದರ ಬಗ್ಗೆ ತಿಳಿಸಿದರು.

ಇನ್ನೋರ್ವ ತರಬೇತಿದಾರರಾಗಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ಶ್ರೀಮತಿ ಸಿಂಧು ವೆಂಕಟೇಶ್ ರವರು ‘ ಗ್ರಂಥಾಲಯದಲ್ಲಿ ಶಿಸ್ತು ಬದ್ಧತೆ ಅತೀ ಮುಖ್ಯ. ಇಲ್ಲಿ ಹಲವಾರು ವಿಷಯಗಳ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ. ಅದನ್ನು ನಾವು ಯಾವ ರೀತಿ ಬಳಸಿಕೊಳ್ಳಬೇಕು ‘ ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಮುಂದಾಳತ್ವವನ್ನು ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಗ್ರಂಥ ಪಾಲಕಿ ಶ್ರೀಮತಿ ಬಬಿತಾ ಮುದ್ದಪ್ಪ ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.