ಕೊಲ್ಲಮೊಗ್ರು ಕೆವಿಜಿ ಅನುದಾನಿತ ಪ್ರೌಢಶಾಲೆಯಲ್ಲಿ ತ್ರೋಬಾಲ್ ಪಂದ್ಯಾಟ

0

ಬಾಲಕರ ವಿಭಾಗ ಬಾಳಿಲ ಪ್ರಥಮ, ಸರ್ಕಾರಿ ಪ್ರೌಢಶಾಲೆ ಏನೆಕಲ್ಲು ದ್ವಿತೀಯ

ಬಾಲಕಿಯರ ವಿಭಾಗ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಪ್ರಥಮ, ಕೆ.ಪಿ.ಎಸ್ ಬೆಳ್ಳಾರೆ ದ್ವಿತೀಯ

ಕೆವಿಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇಲ್ಲಿ ಸೆ. 13 ರಂದು ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ತ್ರೋಬಾಲ್ ಪಂದ್ಯಾಟ ನಡೆಯಿತು .

ತ್ರೋಬಾಲ್ ಪಂದ್ಯಾಟದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಶ್ರೀ ಆಶಾ ನಾಯಕ್ ರವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ವಹಿಸಿದರು .ವೇದಿಕೆಯಲ್ಲಿ ಹರಿಹರ ಕ್ಲಸ್ಟರ್ ಸಿ.ಆರ್‌.ಪಿ ಕುಶಾಲಪ್ಪ, ಎಸ್. ಡಿ.ಎಂ.ಸಿ ಅಧ್ಯಕ್ಷ ಬೊಳಿಯಪ್ಪ ಪೈಕ , ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕಮಲಾಕ್ಷ ಮುಳ್ಳುಬಾಗಿಲು, ಶಾಲಾ ಮುಖ್ಯಗುರುಗಳು ಸುರೇಶ್. ಪಿ.ಕೆ ಉಪಸ್ಥಿತರಿದ್ದರು. ಕಮಲಾಕ್ಷ ಮುಳ್ಳುಬಾಗಿಲು ಸ್ವಾಗತಿಸಿ, ಸಹ ಶಿಕ್ಷಕರಾದ ಲೋಕನಾಥ ಗೌಡ. ಪಿ, ವಂದಿಸಿದರು. ಸಹ ಶಿಕ್ಷಕ ಕೆ .ಕೆ .ವೆಂಕಟರಮಣ ರವರು ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ
ತ್ರೋಬಾಲ್ ಪಂದ್ಯಾಟದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿ ಅಂತಿಮವಾಗಿ ಬಾಲಕರ ವಿಭಾಗದಲ್ಲಿ ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಪ್ರಥಮ, ಸರ್ಕಾರಿ ಪ್ರೌಢಶಾಲೆ ಏನೇಕಲ್ಲು ದ್ವಿತೀಯ ಸ್ಥಾನ ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕು ಜಡ್ಕ ಹಾಗೂ ದ್ವಿತೀಯ ಸ್ಥಾನ ಕೆ.ಪಿ.ಎಸ್
ಬೆಳ್ಳಾರೆ ಪಡೆಯಿತು. ಅರ್ಹತೆ ಪಡೆದುಕೊಂಡರು .8ನೇ ತರಗತಿ ವಿದ್ಯಾರ್ಥಿಗಳಿಗೆ ಅಯ್ಕೆ ಪಂದ್ಯಾಟ ನಡೆಸಲಾಯಿತು .