ಹಿಂದಿ ನಮ್ಮ ರಾಷ್ಟ್ರಭಾಷೆ, ಅದನ್ನು ನಾವು ಪ್ರೀತಿಸೋಣ: ಶಿಲ್ಪಾ ಬಿದ್ದಪ್ಪ
ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸೆ.14 ರಂದು ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು.
5ನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಮೊದಲಿಗೆ ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ‘ ಹಿಂದಿ ನಮ್ಮ ರಾಷ್ಟ್ರ ಭಾಷೆ, ಆ ಭಾಷೆಯನ್ನು ಪ್ರೀತಿಸೋಣ ಎಂದು ಹೇಳಿ ಹಿಂದಿ ಭಾಷೆಯ ಮಹತ್ವದ ಕುರಿತು ತಿಳಿಸಿದರು.
ಬಳಿಕ 5ನೇ ತರಗತಿಯ ಮನಸ್ವಿ ಡಿ ಹಿಂದಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬಳಿಕ ಮೊಹಮ್ಮದ್ ಝಯನ್ ಆ ದಿನದ ಚಿಂತನೆಯನ್ನು ಮಂಡಿಸಿದರೆ, ದೈವಿಕ್ ಚಾಂದ್ ಹಿಂದಿ ದಿನದ ಪ್ರಾಮುಖ್ಯತೆಯ ಕುರಿತು ತಿಳಿಸಿದರು . ವಿದ್ಯಾರ್ಥಿನಿಯರು ಹಿಂದಿ ಗೀತೆಯನ್ನು ಹಾಡಿದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ.ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ವಿದ್ಯಾರ್ಥಿಗಳಲ್ಲಿ ಭಾಷಾಪ್ರೇಮ ಬೆಳೆಸಲು ಇದೊಂದು ಉತ್ತಮ ಕಾರ್ಯಕ್ರಮ ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮವನ್ನು 5ನೇತರಗತಿಯ ಅನರ್ಘ್ಯ ಬಿ.ಎಸ್ ನಿರೂಪಿಸಿದರು. ಶಶಿನಿ ಪೂರ್ಣ ಸ್ವಾಗತಿಸಿ, ವಿಹಾನ್ ಪಿ ವಂದಿಸಿದರು. ಕಾರ್ಯಕ್ರಮದ ಮುಂದಾಳತ್ವವನ್ನು ಹಿಂದಿ ಶಿಕ್ಷಕಿಯರಾದ ಶ್ರೀಮತಿ ಲಲಿತಾ ಭಟ್ ಮತ್ತು ಶ್ರೀಮತಿ ಅನಸೂಯ ಅವರು ವಹಿಸಿಕೊಂಡರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮತ್ತು ಎಲ್ಲಾ ಶಿಕ್ಷಕ, ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.