ಕೆವಿಜಿ ಐಪಿಎಸ್ ನಲ್ಲಿ ಈದ್ ಮಿಲಾದ್ ಮತ್ತು ಓಣಂ ಹಬ್ಬದ ಆಚರಣೆ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೆ. 14 ರಂದು ಈದ್ ಮಿಲಾದ್ ಮತ್ತು ಓಣಂ ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ ವಿದ್ಯಾರ್ಥಿಗಳಲ್ಲಿ ವಿವಿಧ ಹಬ್ಬಗಳ ಕುರಿತು ಅರಿವು ಮೂಡಿಸುವುದು ಅತಿ ಅಗತ್ಯ’ ಎಂದರು. ಈ ಸಂದರ್ಭದಲ್ಲಿ ಈದ್ ಮಿಲಾದ್ ಆಚರಣೆಯ ಮಹತ್ವದ ಬಗ್ಗೆ 9ನೇ ತರಗತಿಯ ದೃತಿ. ಎಸ್ ತಿಳಿಸಿದರೆ, ಓಣಂ ಆಚರಣೆಯ ಮಹತ್ವವನ್ನು ತೃಪ್ತಿ ತಿಳಿಸಿದಳು.

ಕಾರ್ಯಕ್ರಮದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು, ವಿವಿಧ ನೃತ್ಯಗಳನ್ನು ಮಾಡಿ, ಪೂಕಳಂ ಹಾಕಿ ರಂಜಿಸಿದರು. ಕಾರ್ಯಕ್ರಮವನ್ನು 9ನೇ ತರಗತಿಯ ಶ್ರದ್ಧಾ ಪೈ ಮತ್ತು ಬಿ.ಎ ಫಾತಿಮತ್ ತನ್ಸಿಫ ನಿರೂಪಿಸಿದರೆ, ಆಯಿಷತ್ ಉಮ್ಮಲ್ ಫಿದಾ ಸ್ವಾಗತಿಸಿದರು.

ಕಾರ್ಯಕ್ರಮದ ಮುಂದಾಳತ್ವವನ್ನು ಶಾಲಾ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞಾ ಡಿ.ಆರ್ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.