ಮದರಸ ವಿದ್ಯಾರ್ಥಿಗಳ ಕಲೋತ್ಸವ ಮತ್ತು ಸಂಭ್ರಮದ ಕಾಲ್ನಡಿಗೆ ಜಾಥಾ
ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಪೈಗಂಬರ್ ಮುಹಮ್ಮದ್ ನಬಿ ಯವರ ಜನ್ಮ ದಿನಾಚರಣೆ ಈದ್ ಮಿಲಾದ್ ಹಾಗೂ ಮದರಸ ವಿದ್ಯಾರ್ಥಿಗಳ ಕಲೋತ್ಸವ ಮತ್ತು ವಿಜೃಂಭಣೆಯ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಸೆ. 16 ರಂದು ನಡೆಯಿತು.
ಈದ್ ಮಿಲಾದ್ ಪ್ರಯುಕ್ತ ಮುನವ್ವರುಲ್ ಇಸ್ಲಾಮ್ ಹೈಯರ್ ಸೆಕೆಂಡರಿ ಮದರಸ ವಿದ್ಯಾರ್ಥಿಗಳ 2 ದಿನಗಳ ಕಲೋತ್ಸವ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್ ಧ್ವಜಾರೋಹಣ ನೆರವೇರಿಸಿದರು.
ಸ್ಥಳೀಯ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಹಾಫಿಲ್ ದುವಾ ನೆರವೇರಿಸಿದರು.
ಮುಂಜಾನೆ ಮೌಲೂದ್ ಪಾರಾಯಣ ದುವಾ ಮಜ್ಲಿಸ್ ನಡೆದು ಸಾಮೂಹಿಕ ಪ್ರಾರ್ಥನೆ ನಡೆಯಿತು.
ಈದ್ ಮಿಲಾದ್ ಅಂಗವಾಗಿ ಮದರಸಾ ವಠಾರದಲ್ಲಿ ಜಮಾಅತ್ ಅಧ್ಯಕ್ಷರ ನೇತೃತ್ವದಲ್ಲಿ ದ್ವಜಾರೋಹಣ ನಡೆಯಿತು. ಬಳಿಕ ಮಸ್ಜಿದ್ ವಠಾರದಿಂದ ಸುಳ್ಯ ನಗರಬೀದಿಗಳಲ್ಲಿ ಆಕರ್ಷಕ ಮಿಲಾದ್ ರ್ಯಾಲಿ ಬಸ್ಸು ನಿಲ್ದಾಣ ಬಳಿಯಾಗಿ ಜಟ್ಟಿಪಳ್ಳ ರಸ್ತೆ ಮೂಲಕ ಸಾಗಿ ನಾವೂರು ಮೂಲಕ ಗಾಂಧಿನಗರ ಪ್ರವೇಶಿಸಿ ಮಸ್ಜಿದ್ ವಠಾರದಲ್ಲಿ ಸಮಾಪನ ಗೊಂಡಿತು.
ಜಾಥಾದಲ್ಲಿ ದಫ್ ಪ್ರದರ್ಶನ ಮತ್ತು ಮದರಸ ವಿದ್ಯಾರ್ಥಿಗಳ ಮದ್ಹ್ ಗೀತೆ,ಕೀರ್ತನಗಳು ಘೋಷಣೆಗಳು ಆಕರ್ಷಣೆ ಮೆರೆಯಿತು.
ಬಳಿಕ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್ ಸಭಾ ಅಧ್ಯಕ್ಷತೆ ವಹಿಸಿದ್ದರು.
ಅನ್ಸಾರಿಯಾ ಕಾಲೇಜು ಮುದರ್ರಿಸ್ ಹಾಫಿಲ್ ಹಾಮೀದ್ ಸಖಾಫಿ ದುವಾ ನೆರವೇರಿಸಿ ಉದ್ಘಾಟಿಸಿದರು.
ಮುದರ್ರಿಸ್ ಇರ್ಫಾನ್ ಸಖಾಫಿ ಆಶಂಸ ಮಾತನಾಡಿ ಶುಭಾರೈಸಿದರು.
ಸ್ಥಳೀಯ ಖತಿಬರಾದ ಅಶ್ರಫ್ ಖಾಮಿಲ್ ಸಖಾಫಿಯವರು ಮಿಲಾದ್ ಸಂದೇಶ ಭಾಷಣ ಮಾಡಿದರು.
ಪ್ರ.ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ಕೋಶಾಧಿಕಾರಿ ಎಸ್ ಎಂ ಹಮೀದ್ ,ಮದರಸ ಉಸ್ತುವಾರಿಗಳಾದ ಕೆ ಬಿ ಅಬ್ದುಲ್ ಮಜೀದ್, ಹಾಜಿ ಐ ಇಸ್ಮಾಹಿಲ್, ಎಸ್ ಎ ಹಮೀದ್ ಹಾಜಿ, ಸದಸ್ಯರು ಗಳಾದ ಕೆ ಎಸ್ ಉಮ್ಮರ್, ಇಬ್ರಾಹಿಂ ಶಿಲ್ಪಾ,ಕೆಪೆಕ್ ಮಾಜಿ ನಿರ್ದೇಶಕ ಹಾಜಿ ಪಿ ಎ ಮಹಮ್ಮದ್ ಹಾಗೂ ಮುಖಂಡರುಗಳಾದ ಎಸ್ ಪಿ ಅಬೂಬಕ್ಕರ್, ಶಾಫಿ ಕುತ್ತಮಟ್ಟೆ,ಲತೀಫ್ ಹರ್ಲಡ್ಕ,ಉದ್ಯಮಿಗಳಾದ ಅಬ್ದುಲ್ ರಜಾಕ್ ಹಾಜಿ ರಾಜಧಾನಿ,ಯಾಕೂಬ್, ಸಯ್ಯದ್ ಜೈನುಲ್ ಆಬಿದೀನ್ ತಂಗಳ್ ಜಯನಗರ, ಮದರಸ ಸದರ್ ಮುಅಲ್ಲಿಮ್ ಸಿರಾಜುದ್ದಿನ್ ಸಖಾಫಿ ಮತ್ತು ಅಧ್ಯಾಪಕ ವೃಂದ, ವಿದ್ಯಾರ್ಥಿಗಳು,ಹಾಗೂ ಜಮಾಅತ್ ಕಮಿಟಿ ಸದಸ್ಯರು, ಅಲ್ ಅನ್ಸಾರ್ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್ ಹಾಗೂ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮದರಸ ಹಳೆ ವಿದ್ಯಾರ್ಥಿಗಳು,ವಿದ್ಯಾರ್ಥಿಗಳು,ಜಮಾಅತ್ ನ ನೂರಾರು ನಿವಾಸಿಗಳು ಭಾಗವಹಿಸಿದ್ದರು.
ನಿಕಟ ಪೂರ್ವ ಅಧ್ಯಕ್ಷರಾದ ಹಾಜಿ ಕೆ ಎಂ ಮುಸ್ತಫಾ ಜನತಾ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.