ಸೆ 19: ಅರಂತೋಡಿನಲ್ಲಿ “ಅಣಬೆ ಬೇಸಾಯ ತರಬೇತಿ” ಕಾರ್ಯಕ್ರಮ

0

ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ 2024-25ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆ ಯಡಿಯಲ್ಲಿ ಅರಂತೋಡು ಗ್ರಾಮ ಪಂಚಾಯತ್ ಮತ್ತು ಅರಂತೋಡು -ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದೊಂದಿಗೆ “ಅಣಬೆ ಬೇಸಾಯ ಬಗ್ಗೆ ತರಬೇತಿ” ಕಾರ್ಯಕ್ರಮ ಸೆಪ್ಟೆಂಬರ್ 19 ಗುರವಾರದಂದು ಅರಂತೋಡು ಗ್ರಾಮ ಪಂಚಾಯತ್ ನ ಅಮೃತ ಸಭಾಂಗಣ ದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ ಉದ್ಘಾಟಿಸಲಿದ್ದಾರೆ. ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಅಧ್ಯಕ್ಷೆತೆ ವಹಿಸಲಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಕಾಧಿಕಾರಿ ರಾಜಣ್ಣ ಮತ್ತು ಅರಂತೋಡು ಪಂಚಾಯತ್ ಉಪಾಧ್ಯಕ್ಷರಾದ ಭವಾನಿ. ಸಿ. ಎ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಸರಗೋಡಿನ ಪಾಡುರಂಗರವರು ವಿಷಯ ತಜ್ಞ ಭಾಗವಹಿಸಿ ತರಬೇತಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.

ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊದಲು ನೋಂದಾವಣೆ ಮಾಡಿಕೊಂಡ ಅರಂತೋಡು ಪಂಚಾಯತ್ ವ್ಯಾಪ್ತಿಯ 100 ಜನರಿಗೆ ಉಚಿತ ಕಿಟ್ ಗಳನ್ನು ತೋಟಗಾರಿಕೆ ಇಲಾಖೆ ವಿತರಣೆ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮದ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದ್ದಾರೆ.