ಗಾಂಧಿನಗರ : ಕೆ ಪಿ ಎಸ್ ನಲ್ಲಿ ΜΗΑI ವತಿಯಿಂದ ಮಾನಸಿಕ ಅರೋಗ್ಯ ಜಾಗೃತಿ ಮಾಹಿತಿ ಕಾರ್ಯಗಾರಕ್ಕೆ ಚಾಲನೆ

0

ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಶಿಬಿರ ನಡೆಸಿ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ನಿರ್ಮೂಲನೆಗೊಳಿಸುವ ಬಗ್ಗೆ ಜಾಗೃತಿ ಮೂಡಿಸುವ ಗುರಿ: ನಿಹಾಲ್ ಕೋಡ್ತುಗುಳಿ

ಸುಳ್ಯ ಕೆ ವಿ ಜಿ ಆಯುರ್ವೇದಿಕ್ ಕಾಲೇಜ್ ವಿದ್ಯಾರ್ಥಿ ನಿಹಾಲ್ ಕೋಡ್ತುಗುಳಿಯವರ ನೇತೃತ್ವದಲ್ಲಿ ಮೆಂಟಲ್ ಹೆಲ್ತ್ ಅಕಾಡೆಮಿ ಇಂಡಿಯಾ ಬೆಂಗಳೂರು ಇವರ ಸಹಯೋಗದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಗಾರಕ್ಕೆ ಸೆ 17 ರಂದು ಗಾಂಧಿನಗರ ಕೆ ಪಿ ಎಸ್ ನಲ್ಲಿ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಬಲ ಗೊಳಿಸಿ ಅವರ ಜೀವನಕ್ಕೆ ದೊಡ್ಡ ಅನಂತ ದೃಷ್ಟಿಯನ್ನು ದೃಢೀಕರಿಸಲು ನಮ್ಮ ಈ ಕಾರ್ಯಗಾರ ಪೂರಕ ವಾಗಲಿದೆ.ಇತ್ತೀಚಿನ ದಿನಗಳಲ್ಲಿ ಕೆಲವು ಆತ್ಮಹತ್ಯೆ ಪ್ರಕರಣಗಳು ವಿದ್ಯಾರ್ಥಿಗಳಲ್ಲಿಯೂ ಕಂಡು ಬರುತ್ತಿದ್ದು ಇದು ಸಮಾಜಕ್ಕೆ ಮಾರಕ ವಾಗಿದೆ.
ಆದ್ದರಿಂದ ಆತ್ಮಹತ್ಯೆ ಎಂಬ ವಿಷಯದ ಬಗ್ಗೆ ಯಾವುದೇ ವಿದ್ಯಾರ್ಥಿಗಳು ಬಲಿಯಾಗ ಬಾರದು.ಸುಂದರ ಜೀವನವನ್ನು ಸಂತೋಷದಿಂದ ಅನುಭವಿಸಿ ಜೀವಿಸಬೇಕು.ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನಾಧ್ಯಂತ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಶಿಬಿರರವನ್ನು ಮಾಡಬೇಕು ಎಂಬ ಗುರಿಯೊಂದಿಗೆ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದೇವೆ ಎಂದು ಶಿಬಿರದ ಆಯೋಜಕ ನಿಹಾಲ್ ಕೋಡ್ತುಗುಳಿ ತಿಳಿಸಿದರು.

ಕಾರ್ಯಗಾರದ ಉದ್ಘಾಟನೆ ಯನ್ನು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರ ಶೇಖರ್ ಪೇರಾಲು ರವರು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ ಶುಭಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಶಾಲಾ ಉಪ ಪ್ರಾಂಶುಪಾಲೆ ಶ್ರೀಮತಿ ಜ್ಯೋತಿಲಕ್ಷ್ಮಿ ಮಾತನಾಡಿ
‘ಈ ರೀತಿಯ ಮಾಹಿತಿ ಶಿಬಿರ ಬಹಳ ಅರ್ಥ ಪೂರ್ಣ ಕಾರ್ಯಕ್ರಮ ವಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ತಮ್ಮ ಪೋಷಕರ ಬಗ್ಗೆ ಅರಿತು ಕೊಳ್ಳಬೇಕು.ಅವರು ನಿಮಗಾಗಿ ಮಾಡುವ ತ್ಯಾಗಗಳು ಅನುಭವಿಸುವ ಕಷ್ಟಗಳ ಬಗ್ಗೆ ಚಿಂತಿಸಿ ಅವರು ನಿಮ್ಮಲ್ಲಿ ಇಟ್ಟಿರುವ ವಿಶ್ವಾಸಕ್ಕೆ ಅಡ್ಡಿಯಾಗದ ರೀತಿಯ ಜೀವನ ನಿರ್ವಹಿಸಬೇಕೆಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಬೆಳೆಸಲು ಮತ್ತು ಅವರ ಉತ್ತಮ ಭವಿಷ್ಯದ ಬಗ್ಗೆ ಪ್ರೇರಣೆ ನೀಡಲು ಈ ರೀತಿಯ ಕಾರ್ಯಾಗಾರ ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮೆಂಟಲ್ ಹೆಲ್ತ್ ಅಕಾಡೆಮಿ ಇಂಡಿಯಾ (MHAI) ಸ್ಥಾಪಕರಾದ ರಂಜಿತಾ ರಾಜ್ ಮಾತನಾಡಿ ನಮ್ಮ ಸಂಸ್ಥೆ ‘ಅರಿವು, ಬೆಂಬಲ ಕೌಶಲ್ಯಗಳು,ತರಬೇತಿ,ಕಾರ್ಯಾಗಾರಗಳು,ಸಮಾಲೋಚನೆ ಮತ್ತು ಬೆಂಬಲ ಸೇವೆಗಳನ್ನು ಒದಗಿಸುವ ಮೂಲಕ ಮಾನಸಿಕ ಯೋಗ ಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮಾನಸಿಕವಾಗಿ ಆರೋಗ್ಯವಾಗಿರಲು ತನ್ನನ್ನು ತಾನು ಸಶಕ್ತಗೊಳಿಸಲು ಸೇವೆಗಳ ಪರಿಸರ ವ್ಯವಸ್ಥೆಯನ್ನು ರಚಿಸಲು ನಾವು ಯೋಜಿಸುತ್ತೇವೆ.ಮಾನಸಿಕ ಆರೋಗ್ಯದ ಕಳಂಕದ ವಿರುದ್ಧ ಹೋರಾಡುವುದು ನಮ್ಮ ಕೆಲಸದ ನೀತಿಯ ಅವಿಭಾಜ್ಯ ಅಂಗವಾಗಿದೆ.ಸಂಸ್ಥೆಯ ಜ್ಞಾನ ಮತ್ತು ಸೇವೆಗಳನ್ನು ನಗರಗಳಲ್ಲಿ ಮಾತ್ರವಲ್ಲದೆ ತಳಮಟ್ಟದಲ್ಲಿರುವ ಗ್ರಾಮೀಣ ಭಾಗದಲ್ಲಿಯೂ ನೀಡುತ್ತಿದ್ದು ಇಂದಿನ ಕಾರ್ಯಕ್ರಮದ ಆಯೋಜಕರಾಗಿರುವ ನಿಹಾಲ್ ರವರ ಸಹಕಾರದಿಂದ ಸುಳ್ಯದಲ್ಲಿ ಇದು ಸಾಧ್ಯವಾಗಿದೆ.

ನಮ್ಮಲ್ಲಿ ಕಾರ್ಪೋರೇಟ್ ತರಬೇತಿಗಳು, ಸಾಫ್ಟ್ ಸ್ಕಿಲ್ಸ್ ಮತ್ತು ಮಾನಸಿಕ ಆರೋಗ್ಯ,ಮಕ್ಕಳು ಮತ್ತು ವಯಸ್ಕರಿಗೆ ಜೀವನ ಕೌಶಲ್ಯ ತರಬೇತಿ, ಭಾವನಾತ್ಮಕ ಸಮಾಲೋಚನೆ,
ವಿದ್ಯಾರ್ಥಿಗಳು ಮತ್ತು ವಯಸ್ಕರಿಗೆ ಮಾರ್ಗದರ್ಶನ ಮುಂತಾದ ಜಾಗೃತಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತಿದ್ದೇವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ರೋಹನ್ ಎಂ ಎಚ್ ಎ ಐ ಇದರ ಸದಸ್ಯರುಗಳಾದ ರಮ್ಯಾ ಶೆಟ್ಟಿ, ಸೌಮ್ಯಾ ಉಡುಪ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಸದಸ್ಯ ಪಾಣಿನಿ ದೇರಾಜೆ ರವರು ಸುಂದರ ಜೀವನ ರೂಪಿಸುವ ಕುರಿತ ಗೀತೆಯನ್ನು ಹಾಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ನಿಹಾಲ್ ಕೋಡ್ತುಗುಳಿ ಸ್ವಾಗತಿಸಿ ಅಧ್ವಿಕಾ ಕೋಲ್ಚಾರ್ ನಿರೂಪಿಸಿ ವಂದಿಸಿದರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.