ಅಜ್ಜಾವರ ಗ್ರಾಮದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ದ ಮಾತೃ ಶಕ್ತಿ ಹಾಗೂ ದುರ್ಗಾ ವಾಹಿಣಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸೆ.16ರಂದು ನಡೆಯಿತು.
ಭಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಎಲಿಮಲೆ ಸಮಿತಿ ರಚನೆಯ ಕುರಿತು ಮಾಹಿತಿ ನೀಡಿದರು. ನೂತನ ಸಮಿತಿಯ ಉದ್ಘಾಟನೆಯನ್ನು ಶಿವಪ್ರಕಾಶ್ ಅಡ್ಪಂಗಾಯ ನೆರವೇರಿಸಿದರು. ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಅಜ್ಜಾವರ ಧರ್ಮದರ್ಶಿಗಳಾದ ಶ್ರೀ ಭಾಸ್ಕರ್ ರಾವು ಬಯಂಬು ಮಾತೃ ಶಕ್ತಿ ಸಮಿತಿಯ ಸಂಯೋಜಕರಾಗಿ ಶ್ರೀಮತಿ ಮಮತಾ ಪೃಥ್ವಿರಾಜ್ ಮೇನಾಲ, ಸಹ ಸಂಯೋಜಕಿಯಾಗಿ ಶ್ರೀಮತಿ ಸುಗುಣ ಪುರುಷೋತ್ತಮ ಮಾರ್ಗ, ಸತ್ಸಂಗ ಪ್ರಮುಖ್ ಶ್ರೀಮತಿ ಪ್ರಿಯಾ ದಾಮೋದರ ಶಿರಾಜೆ, ಸೇವಾ ಪ್ರಮುಖ್ ಶ್ರೀಮತಿ ವನಿತಾ ಸುಬ್ರಹ್ಮಣ್ಯ ಕರ್ಲಪ್ಪಾಡಿ, ಬಾಲ ಸಂಸ್ಕಾರ ಪ್ರಮುಖ್ ಶ್ರೀಮತಿ ಪಾರ್ವತಿ ಸಂತೋಷ್ ಕಲ್ತಡ್ಕ, ಸಹ ಬಾಲ ಸಂಸ್ಕಾರ ಪ್ರಮುಖ್ ಶ್ರೀಮತಿ ಜಾನಕಿ ರಮೇಶ್ ಬಯಂಬು ಆಯ್ಕೆಯಾದರು.
ದುರ್ಗಾವಾಹಿಣಿ : ಸಂಯೋಜಕಿಯಾಗಿ ಶ್ರೀಮತಿ ರಮ್ಯ ಭವಾನಿಶಂಕರ್ ಶಿರಾಜೆ, ಸಹ ಸಂಯೋಜಕಿಯಾಗಿ ಶ್ರೀಮತಿ ವೀಣಾ ನಾರಾಯಣ ಗೋರಡ್ಕ, ಶಕ್ತಿ ಸದಾನ ಪ್ರಮುಖ್ ಶ್ರೀಮತಿ ನಯನ ಸುದೇಶ್‌ಮೇನಾಲ, ವಿದ್ಯಾರ್ಥಿ ಪ್ರಮುಖ್ ಕು. ಸಿಂಚನ ಶಾಂತಿಮಜಲು, ಸಹ ವಿದ್ಯಾರ್ಥಿ ಪ್ರಮುಖ್ ಕು. ರಜನಿ ನೆಹರೂನಗರ, ಬಾಲ ಸಂಸ್ಕಾರ ಪ್ರಮುಖ್ ಶ್ರೀಮತಿ ಧನಲಕ್ಷ್ಮೀ ಶಾಂತಪ್ಪ ನಾಯ್ಕ್ ಅಡ್ಪಂಗಾಯ, ಸತ್ಸಂಗ ಪ್ರಮುಖ್ ಶ್ರೀಮತಿ ಪದ್ಮಿನಿ ಲೋಕೇಶ್ ದೊಡ್ಡೇರಿ, ಸತ್ಸಂಗ ಸಹ ಪ್ರಮುಖ್ ಶ್ರೀಮತಿ ಜಯಶ್ರೀ ನಾಗೇಶ್ ಬೇಲ್ಯ ಆಯ್ಕೆಯಾದರು.
ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ಮಾತೃಶಕ್ತಿ ಸಂಯೋಜಕರಾದ ಶ್ರೀಮತಿ ರೀನಾ ಚಂದ್ರಶೇಖರ ಚೋಡಿಪನೆ, ತಾಲೂಕು ದುರ್ಗಾ ವಾಹಿನಿ ಪ್ರಮುಖ್ ಶ್ರೀಮತಿ ವಿಶಾಲ ಸೀತಾರಾಮ ಕರ್ಲಪಾಡಿ ಅಜ್ಜಾವರ, ಸಹ ಸಂಯೋಜಕಿ ಪಾರ್ವತಿ ಕುಂಚಡ್ಕ, ಹಿರಿಯರಾದ ಭಾಸ್ಕರ ರಾವ್ ಬಯಂಬು, ಶಿವಪ್ರಸಾದ್ ಅಡ್ಪಂಗಾಯ, ಶಿವಾಜಿ ಶಾಖೆ ಅಜ್ಜಾವರ ಅಧ್ಯಕ್ಷ ನಾರಾಯಣ ಬಂಟ್ರಬೈಲು, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ಶಿವಾಜಿ ಘಟಕ ಕಾರ್ಯದರ್ಶಿ ವಿನಯ ಕರ್ಲಪ್ಪಾಡಿ ಪಡ್ಡಂಬೈಲು, ತಾಲೂಕು ಪ್ರಖಂಡ ಸತ್ಸಂಗ ಪ್ರಮುಖ್ ಸತೀಶ್ ಟಿ.ಎನ್., ಸುಳ್ಯ ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ, ಭಜನಾಮಂದಿರ ಕೋಶಾಧಿಕಾರಿ ಬಾಲಚಂದ್ರ ಮುಡೂರು, ಉಪಾಧ್ಯಕ್ಷರಾದಸೀತಾರಾಮ ಎ.ಎಸ್. ಶಾಂತಿ ಮಜಲು ಸದಸ್ಯರಾದ ಲೋಕೇಶ್ ಅಡ್ಡನ್ ತಡ್ಕ ಶ್ರೀಕೃಷ್ಣ ವಚನ ಮಂದಿರ ಬಯಂ ಬು ಪ್ರಮುಖರಾದ ಸುಂದರ ನೆಹರು ನಗರ ಸಿಎ ಬ್ಯಾಂಕು ನಿರ್ದೇಶಕರಾದ ಪ್ರಬೋದ್ ಶೆಟ್ಟಿ ಮೇನಾಲ ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ ಪ್ರಗತಿಪರ ಕೃಷಿಕರಾದ ಶಶಿಧರ ಶಿರ್ವಜೆ,ಜಯಂತಿ ಜನಾರ್ಧನ ಮೊದಲಾದವರಿದ್ದರು.