ಸುಳ್ಯ ತಾಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬೆಳ್ಳಾರೆಯ ಪನ್ನೆಯಲ್ಲಿ ವಿಶ್ವಕರ್ಮ ಪೂಜೆ ಮತ್ತು ವಿಶ್ವಕರ್ಮ ಜಯಂತಿ

0

ಸುಳ್ಯ ತಾಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬೆಳ್ಳಾರೆಯ ಪನ್ನೆಯ ಶ್ರೀ ಗಾಯತ್ರಿ ವಿಶ್ವಕರ್ಮ ಸಭಾಭವನದಲ್ಲಿ 34ನೇ ವರ್ಷದ ಕನ್ಯಾಸಂಕ್ರಮಣದ ಶ್ರೀ ವಿಶ್ವಕರ್ಮ ಪೂಜೆ ಮತ್ತು ವಿಶ್ವಕರ್ಮ ಜಯಂತಿ ಆಚರಣೆ ಸೆ. 16ರಂದು ಬೆಳ್ಳಾರೆಯ ಪನ್ನೆಯಲ್ಲಿರುವ ಶ್ರೀ ಗಾಯತ್ರಿ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಪೂರ್ವಾಹ್ನ – ಧ್ವಜಾರೋಹಣ ಬಳಿಕ ಶ್ರೀ ವಿಶ್ವಕರ್ಮ ಪೂಜೆ ಆರಂಭಗೊಂಡಿತು. ಮಧ್ಯಾಹ್ನ ಶಾಸಕಿ ಕು. ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಕರ್ಮ ಜಯಂತಿ ಸಭಾ ಕಾರ್ಯಕ್ರಮವನ್ನು ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ ತಹಶಿಲ್ದಾರ್ ಎಂ. ಮಂಜುನಾಥ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ತಾಲೂಕು ವಿಶ್ವ ಬ್ರಾಹ್ಮಣ ಸೇವಾ ಸಂಘ ಬೆಳ್ಳಾರೆ ಇದರ ಅಧ್ಯಕ್ಷ ಸಿ.ಹೆಚ್. ಸೋಮಶೇಖರ ಆಚಾರ್ಯ, ಬೆಳ್ಳಾರೆ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಪನ್ನೆ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಗಿರೀಶ್ ಆಚಾರ್ಯ ಭಾಗವಹಿಸಿದ್ದರು. ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ. ಆಚಾರ್ಯ ಸಂಸ್ಮರಣಾ ಉಪನ್ಯಾಸ ನೀಡಿದರು. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಶ್ರೀಮತಿ ಸುಮಾ ವಿ. ಆಚಾರ್ಯ ಪ್ರಾರ್ಥಿಸಿದರು. ತಾಲೂಕು ವಿಶ್ವ ಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ನಾರಾಯಣ ಎಂ.ಆರ್ ಸ್ವಾಗತಿಸಿ ವಾಸುದೇವ ಆಚಾರ್ಯ ಪೆರುವಾಜೆ ವಂದಿಸಿದರು. ಶ್ರೀಮತಿ ಮಂಜುಳಾ ನಾಗತೀರ್ಥ ಮತ್ತು ವಾಸುದೇವ ಆಚಾರ್ಯ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.