ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಂಬಿಕೆದಾಯೆ ನಾಟಕ ಪ್ರದರ್ಶನ
ಆಲೆಟ್ಟಿ ಗ್ರಾಮದ ಕುಂಚಡ್ಕ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಆಶ್ರಯದಲ್ಲಿ ಮಾಮೂಲು ಪ್ರಕಾರ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ.1 ಮತ್ತು 2 ರಂದು ಜರುಗಿತು.

ಎ.1 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಶುದ್ಧಿ ಕಲಶ ಮೇಲೇರಿ ಕೂಡಿ ,ಸಂಜೆ ದೈವಸ್ಥಾನದಲ್ಲಿ ಕೈವೀದ್ ನಡೆಯಿತು. ಬಳಿಕ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ ದೈವದ ಭಂಡಾರ ತೆಗೆದು ಒತ್ತೆಕೋಲ ಮಜಲಿಗೆ ಆಗಮಿಸಿ ಮೇಲೇರಿಗೆ ಅಗ್ನಿ ಸ್ಪರ್ಶವಾಯಿತು. ಬಳಿಕ ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಪುತ್ತೂರು ಬಲ್ನಾಡು ಸಂಸಾರ ಕಲಾವಿದೆರ್ ತಂಡದ ಕಲಾವಿದರಿಂದ ನಂಬಿಕೆದಾಯೆ ಎಂಬ ತುಳು ನಾಟಕ ಪ್ರದರ್ಶನವಾಯಿತು. ಪ್ರಾತ:ಕಾಲದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶವಾಗಿ ಹರಕೆ ಮತ್ತು ಪ್ರಸಾದ ವಿತರಣೆಯಾಗಿ ಮಾರಿಕಳ ಪ್ರವೇಶವಾಯಿತು.
ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆಯು ನೆರವೇರಿತು.



ಬೆಳಗ್ಗೆ ಎಲ್ಲಾ ಭಕ್ತಾದಿಗಳಿಗೆ
ಅರಸಿನ ಪ್ರಸಾದ ವಿತರಣೆಯಾಯಿತು. ಕುಂಚಡ್ಕ ಕುಟುಂಬದ ಹಿರಿಯರಾದ ದೊಡ್ಡಯ್ಯ ಗೌಡ ಕುಂಚಡ್ಕ, ಒತ್ತೆಕೋಲ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಚಡ್ಕ, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ,
ತೀರ್ಥಕುಮಾರ್ ಕುಂಚಡ್ಕ,ಕಾರ್ಯದರ್ಶಿ ದೀಪಕ್ ಕುಂಚಡ್ಕ, ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.