ಗುತ್ತಿಗಾರಿನಲ್ಲಿ ನಡೆದ ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾಟ: ತಂಡದಲ್ಲಿ ವಯೋಮಿತಿ ಮೀರಿದ ಕ್ರೀಡಾಪಟು

0

ಪ್ರಥಮ ಸ್ಥಾನ ಕಳಕೊಂಡ ಪುತ್ತೂರು ತಾಲೂಕು ಪ್ರಾಥಮಿಕ ಬಾಲಕರ ತಂಡ

ಅಧಿಕಾರಿಗಳ ದುರಾಸೆ : ಇತರ ಕ್ರೀಡಾಪಟುಗಳ ಭವಿಷ್ಯದಲ್ಲಿ ಆಟ

ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಆಡಿ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಕಳಕೊಂಡ ಘಟನೆ ವರದಿಯಾಗಿದೆ.

ಗುತ್ತಿಗಾರಿನ ಪಿ.ಎಂ ಶ್ರೀ ಶಾಲಾ ಮೈದಾನದಲ್ಲಿ ಸೆ. 20ರಂದು ನಡೆದ ಪ್ರಾಥಮಿಕ ಶಾಲಾ ಜಿಲ್ಲಾಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ ಸೈಂಟ್ ಆನ್ಸ್ ಕಡಬ ತಂಡ ಪ್ರಥಮ ಸ್ಥಾನ ಪಡೆದಿತ್ತು. ಆದರೆ ಈ ತಂಡದಲ್ಲಿ ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ಆಟವಾಡಿದ್ದು ಅದು ದೂರು ದಾಖಲಾಗಿ ಆ ತಂಡದ ಪ್ರಥಮ ಸ್ಥಾನವನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ. ಪರಿಣಾಮ ಪ್ರಥಮ ಸ್ಥಾನವನ್ನು ದ್ವಿತೀಯ ಸ್ಥಾನ ಪಡೆದ ಬಂಟ್ವಾಳ ತಾಲೂಕಿಗೆ, ಹಾಗೂ ದ್ವಿತೀಯ ಸ್ಥಾನವನ್ನು ಪ್ರಥಮ ಸ್ಥಾನ ಪಡೆದ ಪುತ್ತೂರು ತಂಡದೊಂದಿಗೆ ಸೆಮಿಫೈನಲ್ಲಿ ಪ್ರಭಾವಗೊಂಡ ಮಂಗಳೂರು ಉತ್ತರ ತಂಡಕ್ಕೆ ನೀಡುವುದಾಗಿ ನಿರ್ಧಾರವಾಗಿರುವುದಾಗಿ ವರದಿಯಾಗಿದೆ.

ಶಾಲಾ ಅಧಿಕಾರಿಗಳ ದುರಾಸೆಗೆ ಪ್ರಥಮ ಸ್ಥಾನ ಕಳಕೊಂಡು ತಂಡದಲ್ಲಿದ್ದ ಇತರೇ ಆಟಗಾರರು ಕ್ರೀಡಾ ಸಾಮರ್ಥ್ಯಕ್ಕೆ ಕೊಳ್ಳಿ ಇಡುವ ಕೆಲಸವನ್ನು ಅಧಿಕಾರಿ ವರ್ಗ ಮಾಡಿದೆ ಎನ್ನಲಾಗಿದ್ದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವವರ ಮೇಲೆ ಕ್ರಮ ಕೈಗೊಳ್ಳುವ ಮಾತು ಕೇಳಿ ಬರಬೇಕಾಗಿದೆ.